Sunday, 22 November 2026 — Kannadavahini
BREAKING NEWS
ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ರಾಜ್ಯ ವಿಬಿಜಿ ರಾಮ್ ಜಿ ಕೆಲಸ 175 ದಿನಕ್ಕೆ ಹೆಚ್ಚಿಸಲು ಕೇಂದ್ರಕ್ಕೆ ಪತ್ರ: ಈಶ್ವರ ಖಂಡ್ರೆ ರಾಜ್ಯ ಕಾಡುಗೊಲ್ಲರನ್ನು ಎಸ್‌ಟಿ ಪಟ್ಟಿಗೆ ಹೊಸ ಕುಲಶಾಸ್ತ್ರೀಯ ಅಧ್ಯಯನ: ಸರ್ಕಾರ ನಿರ್ಧಾರ ದೇಶ ಮಣಿಪುರದಲ್ಲಿ ನಕಲಿ ಮದ್ಯ ಸೇವಿಸಿ 15 ಸಾವು: ತನಿಖೆಗೆ ಆದೇಶ ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್
ಕ್ರೀಡೆ

ಗುಜರಾತ್ ಗೆ 38 ರನ್ ಜಯ; 3ನೇ ತಂಡವಾಗಿ ಹೊರಬಿದ್ದ ಎಸ್ ಆರ್ ಎಚ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 38 ವೀಕ್ಷಣೆಗಳು
prasidda krishna

ಕನ್ನಡಿಗ ಪ್ರಸಿದ್ಧ ಕೃಷ್ಣ ಮಾರಕ ದಾಳಿ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 38 ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡನ್ನು ಸೋಲಿಸಿ ಐಪಿಎಲ್ ಪ್ಲೇಆಫ್ ರೇಸ್ ನಿಂದ ಹೊರದಬ್ಬಿದೆ.

ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 224 ರನ್ ಕಲೆಹಾಕಿತು. ಕಠಿಣ ಗುರಿ ಬೆಂಬತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 186 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ 10 ಪಂದ್ಯಗಳಲ್ಲಿ 7 ಜಯ ಹಾಗೂ 3 ಸೋಲಿನೊಂದಿಗೆ 14 ಅಂಕ ಸಂಪಾದಿಸಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿ ಪ್ಲೇಆಫ್ ಗೆ ಸಮೀಪವಾದರೆ,  ಸನ್ ರೈಸರ್ಸ್ ಹೈದರಾಬಾದ್ 10 ಪಂದ್ಯಗಳಲ್ಲಿ 3 ಜಯ ಹಾಗೂ 7 ಸೋಲಿನೊಂದಿಗೆ 6 ಅಂಕ ಸಂಪಾಸಿ 9ನೇ ಸ್ಥಾನದಲ್ಲೇ ಉಳಿದು ಟೂರ್ನಿಯಿಂದ ಹೊರಬಿದ್ದಿತು. ಎಸ್ ಆರ್ ಎಚ್ ಒಂದು ವೇಳೆ ಎಲ್ಲಾ ಪಂದ್ಯ ಗೆದ್ದರೂ ರನ್ ಸರಾಸರಿಯಲ್ಲಿ ತೀರಾ ಹಿಂದೆ ಉಳಿದಿರುವುದರಿಂದ ಪ್ಲೇಆಫ್ ಪ್ರವೇಶಿಸುವುದು ಅಸಾಧ್ಯವಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಆರಂಭಿಕ ಅಭಿಷೇಕ್ ಶರ್ಮ 41 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ ಸೇರಿದಂತೆ 74 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪ್ರಸಿದ್ಧ ಕೃಷ್ಣ 4 ಓವರ್ ನಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು, ಮೊಹಮದ್ ಸಿರಾಜ್ 2 ವಿಕೆಟ್ ಪಡೆದು ಉತ್ತಮ ಬೆಂಬಲ ನೀಡಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಗೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ 7 ಓವರ್ ನಲ್ಲಿ 87 ರನ್ ಜೊತೆಯಾಟದಿಂದ ಮಿಂಚಿನ ಆರಂಭ ನೀಡಿದರು. ಗಿಲ್ 38 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 76 ರನ್ ಚಚ್ಚಿದರೆ, ಸಾಯಿ 23 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 48 ರನ್ ಗಳಿಸಿದರು.

ನಂತರ ಬಂದ ಜೋಸ್ ಬಟ್ಲರ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೊಂದಿಗೆ 64 ರನ್ ಚಚ್ಚಿದರೆ, ವಾಷಿಂಗ್ಟನ್ ಸುಂದರ್ 21 ರನ್ ಗಳಿಸಿದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8432 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment