Tuesday, December 9, 2025
Google search engine
Homeಕ್ರೀಡೆಲಾರ್ಡ್ಸ್‌ ಟೆಸ್ಟ್‌ ಗೆಲ್ಲಲು ಭಾರತಕ್ಕೆ 193 ರನ್‌ ಗುರಿ

ಲಾರ್ಡ್ಸ್‌ ಟೆಸ್ಟ್‌ ಗೆಲ್ಲಲು ಭಾರತಕ್ಕೆ 193 ರನ್‌ ಗುರಿ

ಸ್ಪಿನ್‌ ಆಲ್‌ ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಶಿಸ್ತಿನ ದಾಳಿ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ ನಲ್ಲಿ ಇಂಗ್ಲೆಂಡ್‌ ತಂಡವನ್ನು 192 ರನ್‌ ಗಳಿಗೆ ಆಲೌಟ್‌ ಮಾಡಿದೆ. ಇದರೊಂದಿಗೆ ಭಾರತ ಮೂರನೇ ಟೆಸ್ಟ್‌ ಗೆಲ್ಲಲು 193 ರನ್‌ ಗಳ ಸವಾಲು ಪಡೆದಿದೆ.

ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವಣ 5 ಪಂದ್ಯಗಳ ಟೆಸ್ಟ್‌ ಸರಣಿಯುವ 1-1ರಿಂದ ಸಮಬಲ ಹೊಂದಿದ್ದು, ರೋಚಕ ಹಂತದಲ್ಲಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸುಮಾರು ಒಂದೂವರೆ ದಿನದಾಟ ಬಾಕಿ ಆಟದಲ್ಲಿ ಭಾರತ 193 ರನ್‌ ಕಲೆ ಹಾಕಬೇಕಾಗಿದ್ದು, ಆರಂಭದಲ್ಲೇ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಮೊದಲ ಇನಿಂಗ್ಸ್‌ ನಲ್ಲಿ ಉಭಯ ತಂಡಗಳು 387 ರನ್‌ ಗಳಿಸಿ ಸಮಬಲ ಸಾಧಿಸಿದ್ದರಿಂದ ಇಂಗ್ಲೆಂಡ್‌ ಎರಡನೇ ಇನಿಂಗ್ಸ್‌ ನಲ್ಲಿ ಕಲೆ ಹಾಕಿದ 193 ರನ್‌ ಗುರಿ ಬೆಂಬತ್ತ ಬೇಕಾಗಿದೆ.

ಮೊದಲ ಇನಿಂಗ್ಸ್‌ ನಲ್ಲಿ ಶತಕ ಸಿಡಿಸಿದ್ದ ಜೋ ರೂಟ್‌ 40 ರನ್‌ ಬಾರಿಸಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದರು. ನಾಯಕ ಬೆನ್‌ ಸ್ಟೋಕ್ಸ್‌ 33 ರನ್‌ ಗಳಿಸಿದರು.
ವಾಷಿಂಗ್ಟನ್‌ ಸುಂದರ್‌ 4 ವಿಕೆಟ್‌ ಪಡೆದು ಮಿಂಚಿದರೆ, ಜಸ್‌ ಪ್ರೀತ್‌ ಬುಮ್ರಾ ಮತ್ತು ಮೊಹಮದ್‌ ಸಿರಾಜ್‌ ತಲಾ 2 ವಿಕೆಟ್‌ ಕಬಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments