Wednesday, November 12, 2025
Google search engine
Homeಕ್ರೀಡೆ51 ಎಸೆತದಲ್ಲಿ 151 ರನ್: ಕ್ರಿಸ್ ಗೇಲ್ ವಿಶ್ವದಾಖಲೆ ಮುರಿದ ಐಪಿಎಲ್ ಅನ್ ಸೋಲ್ಡ್ ಕ್ರಿಕೆಟಿಗ...

51 ಎಸೆತದಲ್ಲಿ 151 ರನ್: ಕ್ರಿಸ್ ಗೇಲ್ ವಿಶ್ವದಾಖಲೆ ಮುರಿದ ಐಪಿಎಲ್ ಅನ್ ಸೋಲ್ಡ್ ಕ್ರಿಕೆಟಿಗ ಫಿನ್!

ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಫಿನ್ ಅಲೆನ್ ಅಮೆರಿಕದಲ್ಲಿ ನಡೆದ ಮೇಜರ್ ಲೀಗ್ ಟಿ-20 ಚಾಂಪಿಯನ್ ಶಿಪ್ 2025ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆಟಗಾರನಾಗಿದ್ದ ಫಿನ್ ಅಲೆನ್ ಸ್ಯಾನ್ ಫ್ರಾನ್ಸಿಸ್ಕೊ ಯೂನಿಕಾರ್ನ್ ತಂಡದ ಪರ ಆಟವಾಡಿದ್ದು, ವಾಷಿಂಗ್ಟನ್ ಫ್ರೀಡಂ ವಿರುದ್ಧ ಕೇವಲ 51 ಎಸೆತಗಳಲ್ಲಿ 151 ರನ್ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.

296 ಸರಾಸರಿಯಲ್ಲಿ ರನ್ ಹೊಳೆ ಹರಿಸಿದ ಫಿನ್, ಕೇವಲ 5 ಬೌಂಡರಿ ಹಾಗೂ 19 ಆಕಾಶದೆತ್ತರದ ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. 49 ಎಸೆತಗಳಲ್ಲಿ 150 ಪೂರೈಸಿದ ಫಿನ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ವಿಶ್ವದಾಖಲೆ ಸೇರಿದಂತೆ ಹಲವು ದಾಖಲೆ ಪುಡಿಗಟ್ಟಿದ್ದಾರೆ.

ಕ್ರಿಸ್ ಗೇಲ್ ಮತ್ತು ಸಾಹಿಲ್ ಚೌಹಾಣ್ ಒಂದೇ ಪಂದ್ಯದಲ್ಲಿ ತಲಾ 18 ಸಿಕ್ಸರ್ ಬಾರಿಸಿದ್ದ ದಾಖಲೆಯನ್ನು ಫಿನ್ ಮುರಿದರು. ವಿಶೇಷ ಅಂದರೆ ಫಿನ್ ಕಳೆದ ವರ್ಷ ನಡೆದ ಐಪಿಎಲ್ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಸೆಳೆಯಲು ಸಾಧ್ಯವಾಗದೇ ಅನ್ ಸೋಲ್ಡ್ ಆಟಗಾರನಾಗಿದ್ದರು. ಅವರ ಮೂಲಧನ 2 ಕೋಟಿ ರೂ. ಆಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments