Monday, 16 November 2026 — Kannadavahini
BREAKING NEWS
ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ
ಕ್ರೀಡೆ

ಸ್ಮೃತಿ, ಪ್ರಿಯಾಂಕಾ ಸೇರಿ 13 ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡ ಆರ್ ಸಿಬಿ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 523 ವೀಕ್ಷಣೆಗಳು
rcb

ಬೆಂಗಳೂರು: ನಾಯಕಿ ಸ್ಮೃತಿ ಮಂದಾನ ಹಾಗೂ ಕನ್ನಡತಿ ಪ್ರಿಯಾಂಕಾ ಪಾಟೀಲ್ ಸೇರಿದಂತೆ 13 ಆಟಗಾರ್ತಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉಳಿಸಿಕೊಂಡಿದೆ.

ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಆಟಗಾರ್ತಿಯರ ಹರಾಜು ಪ್ರಕ್ರಿಯೆಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಹುತೇಕ ಆಟಗಾರ್ತಿಯನ್ನು ಉಳಿಸಿಕೊಂಡಿದ್ದು, ನಾಲ್ವರು ಆಟಗಾರ್ತಿಯನ್ನು ಬಿಟ್ಟುಕೊಟ್ಟಿದೆ.

ಕಳೆದ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದಿದ್ದ ಬೆಂಗಳೂರು ಪಡೆಯನ್ನು ಮುನ್ನಡೆಸಿದ್ದ ಸ್ಮೃತಿ ಮಂಧಾನ ಅವರೇ ಮುಂದಿನ ಆವೃತ್ತಿಯಲ್ಲಿಯೂ ನಾಯಕಿಯಾಗಿ ಮುಂದುವರೆಯಲಿದ್ದು, ಆಸೀಸ್ ಆಲ್​​ರೌಂಡರ್ ಎಲಿಸ್ ಪೆರ್ರಿ ತಂಡಕ್ಕೆ ಮರಳಿದ್ದಾರೆ.

ಆರ್‌ಸಿಬಿ ಉಳಿಸಿಕೊಂಡಿರುವ ನಾಲ್ವರು ವಿದೇಶಿ ಆಟಗಾರ್ತಿಯರ ಪೈಕಿ ಪೆರ್ರಿ ಪ್ರಮುಖರಾಗಿದ್ದಾರೆ. ಇವರೊಂದಿಗೆ ಜಾರ್ಜಿಯಾ ವೋಲ್, ನದಿನ್ ಡಿ ಕ್ಲರ್ಕ್, ಲಾರೆನ್ ಬೆಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಕನ್ನಡತಿ ಶ್ರೇಯಾಂಕಾ ಪಾಟೀಲ್, ಸಯಾಲಿ ಸತ್ಘಾರೆ, ರಿಚಾ ಘೋಷ್, ಪ್ರತ್ಯೂಷಾ ಕುಮಾರ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ರಾಧಾ ಯಾದವ್ ಹಾಗೂ ಪ್ರೇಮಾ ರಾವತ್ ಮುಂಬರುವ ಸೀಸನ್‌ನಲ್ಲೂ ರೆಡ್ ಅಂಡ್ ಬ್ಲ್ಯಾಕ್ ಜೆರ್ಸಿಯಲ್ಲಿ ಮಿಂಚಲಿದ್ದಾರೆ.

ತಂಡದ ಸಂಯೋಜನೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ನಾಲ್ವರು ಆಟಗಾರರಿಗೆ ಆರ್‌ಸಿಬಿ ಗುಡ್‌ಬೈ ಹೇಳಿದೆ. ದಯಾಲನ್ ಹೇಮಲತಾ, ಗೌತಮಿ ನಾಯಕ್, ಗ್ರೇಸ್ ಹ್ಯಾರಿಸ್ ಮತ್ತು ಲಿನ್ಸೆ ಸ್ಮಿತ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ತಂಡದ ತೀರ್ಮಾನದ ಕುರಿತು ಮಾತನಾಡಿರುವ ಆರ್‌ಸಿಬಿ ತಂಡದ ಮುಖ್ಯ ಕೋಚ್ ಮಲೋಲನ್ ರಂಗರಾಜನ್, ಬಿಡುಗಡೆಯಾದ ಆಟಗಾರ್ತಿಯರು ತಂಡದ ದ್ವಿತೀಯ ಚಾಂಪಿಯನ್ ಪಟ್ಟದ ಪಯಣದಲ್ಲಿ ನೀಡಿದ ಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ಎಲಿಸ್ ಪೆರ್ರಿ ಅವರ ಪುನರಾಗಮನವು ತಂಡದ ಎಲ್ಲ ವಿಭಾಗಗಳಿಗೂ ಹೆಚ್ಚಿನ ಶಕ್ತಿ ತಂದಿದೆ ಎಂದಿದ್ದಾರೆ.

ತಂಡದ ಪ್ರಮುಖ 13 ಆಟಗಾರ್ತಿಯರ ಕೋರ್ ಗ್ರೂಪ್ ಅನ್ನು ಉಳಿಸಿಕೊಂಡಿರುವುದು ಗೆಲುವಿನ ಸಂಯೋಜನೆಗೆ ಸಹಕಾರಿಯಾಗಲಿದೆ. ಮುಂಬರುವ ಹರಾಜಿನಲ್ಲಿ ಇನ್ನು ಹೆಚ್ಚಿನ ಬಲವಾದ ಆಟಗಾರ್ತಿಯರನ್ನು ಸೇರಿಸಿಕೊಂಡು ತಂಡವನ್ನು ಇನ್ನಷ್ಟು ಸಜ್ಜುಗೊಳಿಸುವುದು ನಮ್ಮ ಉದ್ದೇಶ ಎಂದು ರಂಗರಾಜನ್ ಸ್ಪಷ್ಟಪಡಿಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8418 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment