ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಸಿಡಿಲಬ್ಬರದ ಆಟದಿಂದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ 241 ರನ್ ಕಠಿಣ ಗುರಿ ಒಡ್ಡಿದೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು
ಸಾಲ್ಟ್ 36 ಎಸೆತಗಳಲ್ಲಿ 6 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ನೊಂದಿಗೆ 78 ರನ್ ಗಳಿಸಿದ್ದಾಗ ಔಟಾದರು. ನಂತರ ಬಂದ ನಾಯಕ ರಜತ್ ಪಟಿದಾರ್ 400 ಸರಾಸರಿಯಲ್ಲಿ ರನ್ ಪೇರಿಸಲು ಆರಂಭಿಸಿದರು.
ವಿರಾಟ್ ಕೊಹ್ಲಿ ವೇಗವಾಗಿ ಆಡಿದರೂ ನಂತರ ವಿಕೆಟ್ ಉಳಿಸಿಕೊಳ್ಳಲು ಯತ್ನಿಸಿದರೂ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 50 ರನ್ ಬಾರಿಸಿ ನಿರ್ಗಮಿಸಿದರು.
ನಾಯಕ ರಜತ್ ಪಟಿದಾರ್ ಒಂದು ಹಂತದಲ್ಲಿ ಕೊಹ್ಲಿಯನ್ನೇ ಹಿಂದಿಕ್ಕುವ ಸೂಚನೆ ನೀಡಿದರು. ಹ್ಯಾಟ್ರಿಕ್ ಸೇರಿದಂತೆ 5 ಸಿಕ್ಸರ್ ನೊಂದಿಗೆ 17 ಎಸೆತಗಳಲ್ಲಿ ಶತಕ ಪೂರೈಸಿದ ಪಟಿದಾರ್ 4 ಬೌಂಡರಿಯೊಂದಿಗೆ 20 ಎಸೆತಗಳಲ್ಲಿ 53 ರನ್ ಬಾರಿಸಿ ಔಟಾದರು.
ಟಿಮ್ ಡೇವಿಡ್ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ 34 ರನ್ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ಸಮೀಪ ಕೊಂಡೊಯ್ದರು.


