Wednesday, November 12, 2025
Google search engine
Homeಕ್ರೀಡೆಆಸ್ಟ್ರೇಲಿಯಾ ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದು ಇತಿಹಾಸ ಬರೆದ ದ.ಆಫ್ರಿಕಾ

ಆಸ್ಟ್ರೇಲಿಯಾ ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದು ಇತಿಹಾಸ ಬರೆದ ದ.ಆಫ್ರಿಕಾ

ಮಧ್ಯಮ ಕ್ರಮಾಂಕದಲ್ಲಿ ಏಡಿಯನ್ ಮರ್ಕರಂ ಸಿಡಿಸಿದ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಮೊದಲ ಬಾರಿ ಟೆಸ್ಟ್ ಚಾಂಪಿಯನ್ ಶಿಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇಂಗ್ಲೆಂಡ್ ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ನಲ್ಲಿ ಆಸ್ಟ್ರೇಲಿಯಾ ಒಡ್ಡಿದ 282 ರನ್ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 4ನೇ ದಿನದಾಟವಾದ ಶನಿವಾರ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ 27 ವರ್ಷಗಳ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡು ಇತಿಹಾಸ ನಿರ್ಮಿಸಿತು.

ಆಸ್ಟ್ರೇಲಿಯಾ ತಂಡವನ್ನು ಎರಡನೇ ಇನಿಂಗ್ಸ್ ನಲ್ಲಿ 207 ರನ್ ಗೆ ಆಲೌಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ ನಲ್ಲಿ ಅನುಭವಿಸಿದ ಇನಿಂಗ್ಸ್ ಹಿನ್ನಡೆಯಿಂದಾಗಿ 282 ರನ್ ಗಳ ಕಠಿಣ ಗುರಿ ಪಡೆದಿತ್ತು.

ದಕ್ಷಿಣ ಆಫ್ರಿಕಾ ತಂಡ ಏಡಿಯನ್ ಮರ್ಕರಂ ಮತ್ತು ನಾಯಕ ಟೆಂಬಾ ಬವುಮಾ 3ನೇ ವಿಕೆಟ್ ಗೆ 147 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ನಿನ್ನೆ ಶತಕ (102) ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಮರ್ಕರಂ 207 ಎಸೆತಗಳಲ್ಲಿ 14 ಬೌಂಡರಿ ಸಹಾಯದಿಂದ 136 ರನ್ ಬಾರಿಸಿ ಔಟಾದರೆ, ಟೆಂಬಾ ಬವುಮಾ 134 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 66 ರನ್ ಬಾರಿಸಿ ನಿರ್ಗಮಿಸಿದರು.

ಇವರಿಬ್ಬರು ಔಟಾಗುವ ವೇಳೆಗೆ ತಂಡದ ಗೆಲುವು ಖಚಿತಗೊಂಡಿದ್ದು, ಡೇವಿಡ್ ಬೆಡಿಗಂ ಅಜೇಯ 21 ರನ್ ಬಾರಿಸಿ ತಂಡದ ಗೆಲುವಿನ ಔಪಚಾರಿಕತೆ ಪೂರೈಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದು ಏಕಾಂಗಿ ಹೋರಾಟ ಪ್ರಯೋಜನವಾಗಲಿಲ್ಲ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 212 ಮತ್ತು 2ನೇ ಇನಿಂಗ್ಸ್ 207

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ 138 ಮತ್ತು 2ನೇ ಇನಿಂಗ್ಸ್ 5 ವಿಕೆಟ್ ಗೆ 282 (ಮರ್ಕರಂ 136, ಬವುಮಾ 66, ಡೇವಿಡ್ 21, ಸ್ಟಾರ್ಕ್ 66/3).

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments