Thursday, October 22, 2026
Google search engine
Homeಮನರಂಜನೆಸೂರ್ಯಕುಮಾರ್ ತುಂಬಾ ಮೆಸೇಜ್ ಮಾಡ್ತಾರೆ: ಬಾಲಿವುಡ್ ನಟಿ ಸ್ಫೋಟಕ ಹೇಳಿಕೆ

ಸೂರ್ಯಕುಮಾರ್ ತುಂಬಾ ಮೆಸೇಜ್ ಮಾಡ್ತಾರೆ: ಬಾಲಿವುಡ್ ನಟಿ ಸ್ಫೋಟಕ ಹೇಳಿಕೆ

ಭಾರತ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ನನಗೆ ತುಂಬಾ ಮೆಸೇಜ್ ಮಾಡುತ್ತಿರುತ್ತಾರೆ ಎಂದು ಬಾಲಿವುಡ್ ನಟಿ ಹಾಗೂ ರೂಪದರ್ಶಿ ಖುಷಿ ಮುಖರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಎಂಟಿವಿ ಸ್ಪಿಟ್ ಸಿಲ್ವಾ ರಿಯಾಲಿಟಿ ಶೋನಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದ ಖುಷಿ ಮುಖರ್ಜಿ ಮಾಧ್ಯಮ ಸಂದರ್ಶನದಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸೂರ್ಯಕುಮಾರ್ ಯಾದವ್ ಪದೇಪದೇ ನನಗೆ ಮೆಸೇಜ್ ಮಾಡುತ್ತಿದ್ದರು ಎಂದು ಪುನರುಚ್ಚರಿಸಿರುವ ಆಕೆ ಆದರೆ ಇಬ್ಬರ ನಡುವೆ ಯಾವುದೇ ಪ್ರೇಮ-ಪ್ರೀತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಖುಷಿ ಮುಖರ್ಜಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಸುತ್ತಾಟ ಮೊದಲೇನಲ್ಲ ಎಂದು ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಿರಬೇಕು ಎಂದು ಹೇಳಿದ್ದಾರೆ.

ಹಲವಾರು ರಿಯಾಲಿಟಿ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಖುಷಿ ಮುಖರ್ಜಿ, 2013 ಮತ್ತು ಅಂಜಲ್ ತುರಾಯ್ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು.

ಇದೇ ವೇಳೆ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಜೊತೆ ವೈಕುಂಠ ಏಕಾದಶಿ ದಿನದಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments