Monday, July 6, 2026
Google search engine
Homeಕ್ರೀಡೆವೈಭವ್ ಸೂರ್ಯವಂಶಿ ವಿಶ್ವದಾಖಲೆ: ದ.ಆಫ್ರಿಕಾ ವಿರುದ್ಧ ಭಾರತ 3-0ಯಿಂದ ಕ್ಲೀನ್ ಸ್ವೀಪ್

ವೈಭವ್ ಸೂರ್ಯವಂಶಿ ವಿಶ್ವದಾಖಲೆ: ದ.ಆಫ್ರಿಕಾ ವಿರುದ್ಧ ಭಾರತ 3-0ಯಿಂದ ಕ್ಲೀನ್ ಸ್ವೀಪ್

ವೈಭವ್ ಸೂರ್ಯವಂಶಿ ನಾಯಕನಾಗಿ ಶತಕ ಗಳಿಸಿದ ಅತ್ಯಂತ ಕಿರಿಯ ಹಾಗೂ ಮೊದಲ ವಿಕೆಟ್ ಗೆ ವಿಶ್ವ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ 233 ರನ್ ಗಳ ಭಾರೀ ಅಂತರದಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ 3 ಪಂದ್ಯಗಳ 19 ವರ್ಷದೊಳಗಿನವ ಏಕದಿನ ಸರಣಿಯನ್ನು 3-0ಯಿಂದ ಕ್ಲೀನ್ ಸ್ವೀಪ್ ಮಾಡಿದೆ.

ಬೆನೊಯಿಯಲ್ಲಿ ಬುಧವಾರ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಇಬ್ಬರು ಆರಂಭಿಕರು ಸಿಡಿಸಿದ ಶತಕಗಳ ನೆರವಿನಿಂದ 50 ಓವರ್ ಗಳಲ್ಲಿ 7 ವಿಕೆಟ್ ಗೆ 393 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 35 ಓವರ್ ಗಳಲ್ಲಿ 160 ರನ್ ಗೆ ಆಲೌಟಾಯಿತು.

ನಾಯಕ ವೈಭವ್ ಸೂರ್ಯವಂಶಿ 74 ಎಸೆತಗಳಲ್ಲಿ 9 ಬೌಂಡರಿ ಮತ್ತು 10 ಸಿಕ್ಸರ್ ಒಳಗೊಂಡ 127 ರನ್ ಸಿಡಿಸಿದರು. ಈ ಮೂಲಕ ನಾಯಕನಾಗಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದರು.

ಅಲ್ಲದೇ ಸೂರ್ಯವಂಶಿ ಮೊದಲ ವಿಕೆಟ್ ಗೆ ಏರಾನ್ ಜಾರ್ಜ್ ಜೊತೆ 227 ರನ್ ಗಳ ಜೊತೆಯಾಟ ನಿಭಾಯಿಸಿ ಕಿರಿಯರ ಕ್ರಿಕೆಟ್ ನಲ್ಲಿ ಮೊದಲ ವಿಕೆಟ್ ಗೆ ಅತೀ ದೊಡ್ಡ ಜೊತೆಯಾಟದ ದಾಖಲೆ ಬರೆದರು. ಏರಾನ್ ಜಾರ್ಜ್ 106 ಎಸೆತಗಳಲ್ಲಿ 16 ಬೌಂಡರಿ ಸಹಾಯದಿಂದ 118 ರನ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments