Sunday, May 31, 2026
Google search engine
Homeರಾಜ್ಯಕರ್ಮ ರಿಟರ್ನ್ಸ್: ಅಣ್ಣನ ಮನೆಗೆ ಬೆಂಕಿ ಹಚ್ಚಿದ ತಮ್ಮನನ್ನೇ ಸುಟ್ಟಿತು!

ಕರ್ಮ ರಿಟರ್ನ್ಸ್: ಅಣ್ಣನ ಮನೆಗೆ ಬೆಂಕಿ ಹಚ್ಚಿದ ತಮ್ಮನನ್ನೇ ಸುಟ್ಟಿತು!

ಬೆಂಗಳೂರು: ಮಧ್ಯರಾತ್ರಿಯಲ್ಲಿ ಹೊಂಚು ಹಾಕಿ ಅಣ್ಣನ ಮನೆ ಸುಡಲು ಹೋಗಿ ಆ ಬೆಂಕಿಯಲ್ಲಿ ಸಿಲುಕಿ ತಾನೇ ಸುಟ್ಟುಕೊಂಡು  ತಮ್ಮ ಆಸ್ಪತ್ರೆ ಸೇರಿರುವ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.

ಬೆಂಕಿ ಹಚ್ಚಿರುವ ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಗಾಯಗೊಂಡಿರುವ ಮುನಿರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದನು, ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ ಕಾರಣ ಸ್ವಲ್ಪ ಜಮೀನು ಮಾರಿ ಕುಟುಂಬಸ್ಥರು ಹಣ ನೀಡಿದ್ದರು. ಆದರೆ ಆ ಹಣ ಸಾಕಾಗದ ಕಾರಣ ಉಳಿದ ಜಮೀನು ಸಹ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಆರೋಪಿ ಮುನಿರಾಜು ಕೇಳಿದ್ದ. ಆದರೆ ಇರುವ ಅಲ್ಪ ಸ್ವಲ್ಪ ಜಮೀನು ಮಾರಲ್ಲ ಎಂದು ಅಣ್ಣ ಸ್ಪಷ್ಟವಾಗಿ ಹೇಳಿದ್ದ. ಹೀಗಾಗಿ ಸಹೋದರ ರಾಮಕೃಷ್ಣ ಕುಟುಂಬವನ್ನೇ ಮುಗಿಸುವ ಸಂಚುಮಾಡಿದ್ದ ಮುನಿರಾಜು, ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ರೂಂನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು.

ಆದರೆ ಅಣ್ಣನ ಕುಟುಂಬವನ್ನೇ ನಿರ್ನಾಮ ಮಾಡಲು ಹೋದ ಮುನಿರಾಜುವಿಗೆ ದೇವರು ಅಲ್ಲೇ ಶಿಕ್ಷೆ ಕೊಟ್ಟಿದ್ದಾನೆ. ಬೆಂಕಿ ಹಚ್ಚುವ ವೇಳೆ ಈತನ ಕೈನಲ್ಲಿ ಪೆಟ್ರೋಲ್​​ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನೇ ಸುಟ್ಟಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾಪಾಡಿ ಕಾಪಾಡಿ ಎಂದು ಮುನಿರಾಜು ಕಿರುಚಾಡಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಾಯಾಳುವಿಗೆ ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಈ ಸಂಬಂಧ ತಿರುಮಲಶೆಟ್ಟಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments