Saturday, 7 November 2026 — Kannadavahini
BREAKING NEWS
ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಕಾನೂನು ಬಿಜೆಪಿ ವಿರುದ್ಧ ಅಪಪ್ರಚಾರ: ಡಿಕೆಶಿ, ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ರಾಜ್ಯ ಕೆಪಿಎಸ್ ಸಿ ಹಗರಣ: ಎಸ್ ಐಟಿ ಮುಖ್ಯಸ್ಥರಾಗಿ ಹಿತೇಂದ್ರ ನೇಮಕ ರಾಜ್ಯ ಜಿಎಸ್‌ಎಂಎ ಆಡಳಿತ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ಮರು ಆಯ್ಕೆ ಬೆಂಗಳೂರು 2035ರ ವೇಳೆಗೆ ಭಾರತದ ಶೀತಲ ವ್ಯವಸ್ಥೆಯ ಬೇಡಿಕೆ ದುಪ್ಪಟ್ಟಿಗಿಂತ ಹೆಚ್ಚಾಗುವ ಮುನ್ಸೂಚನೆ ಬೆಂಗಳೂರು ಬೆಂಗಳೂರಿನಲ್ಲಿ ಘೋರ ದುರಂತ: ಪಂಚತಾರಾ ಹೋಟೆಲ್‌ ಈಜುಕೊಳದಲ್ಲಿ ಕರೆಂಟ್‌ ಹೊಡೆದು ಇಬ್ಬರು ವಿದೇಶಿಯರ ಸಾವು ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಕಾನೂನು ಬಿಜೆಪಿ ವಿರುದ್ಧ ಅಪಪ್ರಚಾರ: ಡಿಕೆಶಿ, ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ರಾಜ್ಯ ಕೆಪಿಎಸ್ ಸಿ ಹಗರಣ: ಎಸ್ ಐಟಿ ಮುಖ್ಯಸ್ಥರಾಗಿ ಹಿತೇಂದ್ರ ನೇಮಕ ರಾಜ್ಯ ಜಿಎಸ್‌ಎಂಎ ಆಡಳಿತ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ಮರು ಆಯ್ಕೆ ಬೆಂಗಳೂರು 2035ರ ವೇಳೆಗೆ ಭಾರತದ ಶೀತಲ ವ್ಯವಸ್ಥೆಯ ಬೇಡಿಕೆ ದುಪ್ಪಟ್ಟಿಗಿಂತ ಹೆಚ್ಚಾಗುವ ಮುನ್ಸೂಚನೆ ಬೆಂಗಳೂರು ಬೆಂಗಳೂರಿನಲ್ಲಿ ಘೋರ ದುರಂತ: ಪಂಚತಾರಾ ಹೋಟೆಲ್‌ ಈಜುಕೊಳದಲ್ಲಿ ಕರೆಂಟ್‌ ಹೊಡೆದು ಇಬ್ಬರು ವಿದೇಶಿಯರ ಸಾವು
ರಾಜ್ಯ

ತುಮಕೂರಿನಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಬಲಿ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 14 ವೀಕ್ಷಣೆಗಳು
tumakur accident

ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಬಳಿ ಸಂಭವಿಸಿದೆ.

ಹಿರಿಯೂರಿನಿಂದ ಹುಳಿಯಾರು ಕಡೆಗೆ ಬರುತ್ತಿದ್ದ ಕಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಮೃತಪಟ್ಟವರು ಆಂಧ್ರಪ್ರದೇಶ ಮೂಲದವರು ಎನ್ನಲಾಗುತ್ತಿದೆ. ಈ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಕಾರಿನಲ್ಲಿದ್ದ ವೃದ್ಧ ದಂಪತಿ ಸೇರಿ ಮೂವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಪೊಲೀಸರು ಮೃತರ ಗುರುತು ಪತ್ತೆ ಮತ್ತು ಅವರ ಕುಟುಂಬವನ್ನು ಸಂಪರ್ಕಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಅತಿಯಾದ ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿರುವುದೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಒಂದು ಕಾರಿನ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಕಾರಿಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಅಪಘಾತಕ್ಕೆ ತಾಂತ್ರಿಕ ಕಾರಣಗಳಿವೆಯೇ ಅಥವಾ ಓವರ್‌ ಟೇಕ್‌ ಮಾಡಲು ಹೋಗಿ ಈ ಘಟನೆ ಸಂಭವಿಸಿದೆಯೇ ಎಂಬ ವಿವರ ತನಿಖೆ ಬಳಿಕ ಬಯಲಾಗಲಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8404 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment