ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ ಐಟಿಗೆ ಬುಧವಾರ ಮತ್ತೆ ಎರಡು ಕಡೆ ಮೂಳೆಗಳು ಸಿಕ್ಕಿವೆ.
ಎಸ್ ಐಟಿ ವಶದಲ್ಲಿರುವ ಚಿನ್ನಯ್ಯ ಈ ಹಿಂದೆ ತೋರಿಸಿದ 14 ಜಾಗಗಳ ಪೈಕಿ ಎರಡು ಕಡೆ ಮಾತ್ರ ಮೂಳೆಗಳು ಪತ್ತೆಯಾಗಿದ್ದವು. ಇದೀಗ ಬಂಗ್ಲೆಗುಡ್ಡದ ಜಾಗವೂ ಸೇರಿತ್ತು.
ಚಿನ್ನಯ್ಯ ಹೇಳಿದಂತೆ ನೂರಾರು ಶವಗಳು ದೊರೆಯದ ಕಾರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಬುಧವಾರ ಸ್ಥಳ ಮಹಜರು ನಡೆಸಲು ಮುಂದಾಗಿದ್ದು, ಮತ್ತೆರಡು ಕಡೆ ಮೂಳೆಗಳು ಪತ್ತೆಯಾಗಿವೆ.
ಬುಧವಾರ ಬೆಳಿಗ್ಗೆ ಮೂರು ತಂಡಗಳಾಗಿ ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡದ ಬಳಿ ಸ್ಥಳ ಪರಿಶೀಲನೆ ನಡೆಸಿದ್ದಾಗ ಈ ಹಿಂದೆ ಚಿನ್ನಯ್ಯ ತೋರಿಸಿದ ಜಾಗ 11ರ ಬಳಿ ಸೇರಿದಂತೆ ಎರಡು ಕಡೆ ಮೂಳೆಗಳು ಪತ್ತೆಯಾಗಿವೆ.
ಎಸ್ ಐಟಿ ಅಧಿಕಾರಿಗಳು ಮೂಳೆಗಳನ್ನು ಹಾಗೂ ಆ ಜಾಗದ ಮಣ್ಣು ಸೇರಿದಂತೆ ಇತರೆ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿದ್ದು ಎಫ್ ಎಸ್ ಎಲ್ ವರದಿಗೆ ಕಳುಹಿಸಲು ಸಿದ್ಧತೆ ನಡೆಸಿದೆ.
ಕೆಲವು ದಿನಗಳ ಹಿಂದೆ ಮೃತಪಟ್ಟ ಸೌಜನ್ಯ ಅವರ ಮಾವ ವಿಠಲ ಗೌಡ ನಾನು ಬಂಗ್ಲೆಗುಡ್ಡದ ಸಮೀಪದ ಹಲವು ಶವಗಳನ್ನು ನೋಡಿದ್ದೇನೆ. ಅದರಲ್ಲಿ ಒಂದು ಮಗುವಿನ ಮೂಳೆಯೂ ಇತ್ತು ಎಂದು ಬಾಂಬ್ ಸಿಡಿಸಿದಿ್ದರು. ಇದೇ ವೇಳೆ ಸಾಮಾಜಿಕ ಹೋರಾಟಗಾರ ಮಹೇಶ್ ತಿಮರೂಡಿ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿ ವೀಡಿಯೋ ಬಿಡುಗಡೆ ಮಾಡಿದ್ದರು.



