Sunday, July 5, 2026
Google search engine
Homeಕ್ರೀಡೆ10 ಸಿಕ್ಸರ್, 68 ರನ್:  ಸೂರ್ಯವಂಶಿ ಆರ್ಭಟಕ್ಕೆ ಮಣಿದ ದ.ಆಫ್ರಿಕಾ

10 ಸಿಕ್ಸರ್, 68 ರನ್:  ಸೂರ್ಯವಂಶಿ ಆರ್ಭಟಕ್ಕೆ ಮಣಿದ ದ.ಆಫ್ರಿಕಾ

ಆರಂಭಿಕ ವೈಭವ್ ಸೂರ್ಯವಂಶಿ ಆಟದ ಮುಂದೆ ದಕ್ಷಿಣ ಆಫ್ರಿಕಾದ ಜೇಸನ್ ರೊವಲ್ಸ್ ಶತಕ ಕೂಡ ವ್ಯರ್ಥಗೊಂಡಿತು. 8 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತ ತಂಡ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ.

ಬೆನೊನಿಯಲ್ಲಿ ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 49.3 ಓವರ್ ಗಳಲ್ಲಿ 245 ರನ್ ಗೆ ಆಲೌಟಾಯಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 11 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿದಾಗ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತು.

ಡಕ್ ವರ್ತ್ ಲೂಯಿಸ್ ನಿಯಮದಡಿ ಭಾರತಕ್ಕೆ 27 ಓವರ್ ಗಳಲ್ಲಿ 174 ರನ್ ಗಳ ಪರಿಷ್ಕೃತ ಗುರಿ ನೀಡಲಾಯಿತು. ಭಾರತ ತಂಡ 23.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಭಾರತ ತಂಡಕ್ಕೆ ನಾಯಕ ವೈಭವ್ ಸೂರ್ಯವಂಶಿ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 10 ಸಿಕ್ಸರ್ ನೆರವಿನಿಂದ 68 ರನ್ ಸೇರಿಸಿ ತಂಡಕ್ಕೆ ಮಿಂಚಿನ ಆರಂಭ ನೀಡಿದರು. ಇದರಿಂದ ಭಾರತ ಮಳೆ ಅಡ್ಡಿಪಡಿಸಿದರೂ ಸುಲಭ ಗೆಲುವು ದಾಖಲಿಸಲು ನೆರವಾಯಿತು.

ಭಾರತದ ಪರ ಏರಾನ್ ಜಾರ್ಜ್ (20), ವೇದಾಂತ್ ತ್ರಿವೇದಿ (31 ಅಜೇಯ) ಮತ್ತು ಅಭಿಗ್ಯಾನ್ ಕುಂದು (ಅಜೇಯ 48) ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಜೇಸನ್ ರೋವಲ್ಸ್ ಶತಕ ಸಿಡಿಸಿ ತಂಡವನ್ನು ಆಧರಿಸಿದರು. ಜೇಸನ್ ರೋವಲ್ಸ್ 113 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 114 ರನ್ ಸಿಡಿಸಿದರು.

ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ 96 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಜೇಸನ್ ಸಾಹಸದಿಂದ ಪೈಪೋಟಿಯ ಮೊತ್ತ ಕಲೆಹಾಕಲು ನೆರವಾಯಿತು. ಭಾರತದ ಪರ ಕಿಶನ್ ಸಿಂಗ್ 4 ವಿಕೆಟ್ ಪಡೆದು ಮಿಂಚಿದರೆ, ಅಮರೀಶ್ 2 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments