ಪತ್ರಕರ್ತ ಹಾಗೂ ಕಾರ್ಖಾನೆಯೊಂದರ ಮಾಲೀಕರಾಗಿರುವ ಹಿಂದೂ ವ್ಯಕ್ತಿಗೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಹಣೆಗೆ ಗುಂಡಿಟ್ಟು ಕೊಂದ ಭೀಕರ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.
ಕೊಲೆಯಾದ 45 ವರ್ಷದ ರಾಣಾ ಪ್ರತಾಪ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಎಂದು ಹೇಳಲಾಗಿದೆ.
ಹಿಂದೂ ವಿಧವೆ ಮೇಲೆ ಅತ್ಯಾಚಾರ ಎಸಗಿ ಕೂದಲು ಕತ್ತರಿಸಿ ವಿಕೃತಿ ಮೆರೆದ ಘಟನೆ ಬೆನ್ನಲ್ಲೇ ಮತ್ತೊಬ್ಬ ಹಿಂದೂ ವ್ಯಕ್ತಿಯ ಕೊಲೆ ಬಾಂಗ್ಲಾದೇಶದಲ್ಲಿ ನಡೆದಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲೆ ಸತತವಾಗಿ ದೌರ್ಜನ್ಯ ಮುಂದುವರಿಯುತ್ತಿರುವುದು ಆಘಾತಕಾರಿ ಬೆಳವಣಿಗೆ ಆಗಿದೆ.
ದಕ್ಷಿಣ ಬಾಂಗ್ಲಾದೇಶದ ಜಾನ್ಸೊರೆ ಜಿಲ್ಲೆಯ ಮಣಿರಾಂಪುರ್ ಪಟ್ಟಣದಲ್ಲಿ ಕೊಪಾಲಿಯಾ ಬಜಾರ್ ನಲ್ಲಿ ಸೋಮವಾರ ಸಂಜೆ 6 ಗಂಟೆ ವೇಳೆಗೆ ರಾಣಾ ಪ್ರತಾಪ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಗೈಯ್ಯಲಾಗಿದೆ.
ಔರಾ ಗ್ರಾಮದಲ್ಲಿ ಶಾಲಾ ಶಿಕ್ಷಕರ ಮಗನಾಗಿರುವ ಪ್ರತಾಪ್ ಐಸ್ ಫ್ಯಾಕ್ಟರಿ ಮಾಲೀಕರಾಗಿದ್ದು, ಸ್ಥಳೀಯ ಪತ್ರಿಕೆಯಲ್ಲಿ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದರು ಎಂದು ಮನೋಹರ್ ಯೂನಿಯನ್ ಪ್ರಸಾದ್ ತಿಳಿಸಿದ್ದಾರೆ.



