Wednesday, September 30, 2026
Google search engine
Homeಕ್ರೀಡೆಅಂಡರ್ 19 ಮಹಿಳಾ ವಿಶ್ವಕಪ್: ಸತತ 2ನೇ ಬಾರಿಗೆ ಭಾರತ ಫೈನಲ್ ಗೆ ಲಗ್ಗೆ

ಅಂಡರ್ 19 ಮಹಿಳಾ ವಿಶ್ವಕಪ್: ಸತತ 2ನೇ ಬಾರಿಗೆ ಭಾರತ ಫೈನಲ್ ಗೆ ಲಗ್ಗೆ

ಹಾಲಿ ಚಾಂಪಿಯನ್ ಭಾರತ ತಂಡ 9 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ 19 ವರ್ಷದೊಳಗಿನವರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

ಕೌಲಾಲಂಪುರದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 8 ವಿಕೆಟ್ ಗೆ 113 ರನ್ ಗಳಿಗೆ ಕಟ್ಟಿ ಹಾಕಿದ ಭಾರತ ತಂಡ 15 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಭಾರತ ತಂಡದ ಪರ ಆರಂಭಿಕ ಆಟಗಾರ್ತಿ ಕಮಲಿನಿ 50 ಎಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 56 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಗೊಂಗಾಡಿ ತ್ರಿಷಾ 36 ರನ್ ಬಾರಿಸಿ ಔಟಾದರು. ಇವರಿಬ್ಬರು ಮೊದಲ ವಿಕೆಟ್ ಗೆ 60 ರನ್ ಜೊತೆಯಾಟದಿಂದ ತಂಡದ ಗೆಲುವಿನ ಹಾದಿ ಸುಲಭಗೊಳಿಸಿದರು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಇಂಗ್ಲೆಂಡ್ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ್ತಿ ಡೇವಿನಾ ಪೆರೆನ್ 40 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 45 ರನ್ ಬಾರಿಸಿ ಗರಿಷ್ಠ ಸಾಧನೆ ಮಾಡಿದರು.

ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಅಬಿ ನೊರ್ಗೊವ್ (30) ಮಾತ್ರ ಎರಡಂಕಿಯ ಮೊತ್ತ ದಾಖಲಿಸಿ ಹೋರಾಟ ನಡೆಸಿದರು.

ಭಾರತದ ಪರ ಪರುಣಿಕಾ ಸಿಸೊಡಿಯಾ ಮತ್ತು ವೈಷ್ಣವಿ ಶರ್ಮ ತಲಾ 3 ವಿಕೆಟ್ ಕಬಳಿಸಿದರೆ, ಆಯುಷಿ ಶುಕ್ಲ 2 ವಿಕೆಟ್ ಪಡೆದು ಮಿಂಚಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments