Monday, May 25, 2026
Google search engine
Homeಅಪರಾಧಸೋದರರ ಜೊತೆ ಗಂಡನ ಜೀವಂತ ಹೂತುಹಾಕಲು ಪತ್ನಿ ಯತ್ನ: ದೇವರಂತೆ ಬಂದ ಅಪರಿಚಿತ!

ಸೋದರರ ಜೊತೆ ಗಂಡನ ಜೀವಂತ ಹೂತುಹಾಕಲು ಪತ್ನಿ ಯತ್ನ: ದೇವರಂತೆ ಬಂದ ಅಪರಿಚಿತ!

ಸೋದರರು ಸೇರಿದಂತೆ ಕುಟುಂಬದವರ ಜೊತೆ ಸೇರಿ ಗಂಡನನ್ನು ಕೊಂದು ಹೂತು ಹಾಕಲು ಯತ್ನಿಸಿದ್ದು, ಅಪರಿಚಿತ ವ್ಯಕ್ತಿಯಿಂದ ಪತಿ ಬದುಕುಳಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಇಜ್ಜತ್ ನಗರದಲ್ಲಿ ಈ ಘಟನೆ ನಡೆದಿದ್ದು, ಪತಿಯ ಕೈ ಕಾಲು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತ್ನಿ ಸಾಧನಾ, ಅತ್ತೆ-ಮಾವ ಹಾಗೂ ಸೋದರರಾದ ಭಗವಾನ್ ದಾಸ್, ಪ್ರೇಮರಾಜ್, ಹರೀಶ್ ಮತ್ತು ಲಕ್ಷ್ಮಣ್ ಸೇರಿದಂತೆ 6ರಿಂದ 7 ಮಂದಿ ಅಳಿಯ ರಾಜೀವ್ ನನ್ನು ಕಾಡಿಗೆ ಕರೆದೊಯ್ದು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ಕೊಲೆ ಮಾಡಿ ಹೂತುಹಾಕುವ ಪ್ರಯತ್ನದಲ್ಲಿದ್ದಾಗ ಏಕಾಏಕಿ ಸ್ಥಳಕ್ಕೆ ಬಂದ ಅಪರಿಚಿತ ವ್ಯಕ್ತಿ ಬದುಕಿಸಿದ್ದಾನೆ.

ವೈದ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರಾಜೀವ್ ಹಲ್ಲೆಯಿಂದ ಕೈಕಾಲುಗಳು ಮುರಿದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಅಪರಿಚಿತ ವ್ಯಕ್ತಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಸೋದರರ ಜೊತೆಗೂಡಿದ ಪತ್ನಿ ಸುಪಾರಿ ನೀಡಿ ಗಂಡನ ಕೊಲೆಗೆ ಸಂಚು ರೂಪಿಸಿದ್ದಳು.  ಸಿಬಿ ಗಂಜ್ ಪ್ರದೇಶದ ಕಾಡಿಗೆ ಹೊತ್ತೊಯ್ದು ಗಂಡನ ಮೇಲೆ ಹಲ್ಲೆ ಮಾಡಿ ಜೀವಂತವಾಗಿ ಹೂಳಲಯ ಯತ್ನಿಸಿದ್ದಳು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಅಪರಿಚಿತ ವ್ಯಕ್ತಿಯ ಆಗಮನದಿಂದ ಕೊಲೆ ಯತ್ನ ಕೈಬಿಟ್ಟು ಪರಾರಿಯಾಗಿದ್ದಾರೆ.

ಕೈಕಾಕಲು ಮುರಿತದಿಂದ ಅಸ್ವಸ್ಥಗೊಂಡಿದ್ದ ರಾಜೀವ್ ಕೂಗಲೂ ಆಗದಂತಹ ಸ್ಥಿತಿಯಲ್ಲಿದ್ದರು. ಈ ವೇಳೆ ದೇವರಂತೆ ಬಂದ ಅಪರಿಚಿತ ವ್ಯಕ್ತಿ ಇದನ್ನು ಗಮನಿಸಿ ಕೂಡಲೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸುವ ಮೂಲಕ ರಕ್ಷಿಸಿದ್ದಾನೆ.

ರಾಜೀವ್‌ನ ತಂದೆ ನೇತ್ರಮ್, ತನ್ನ ಸೊಸೆ ಮತ್ತು ಆಕೆಯ ಸಹೋದರರ ವಿರುದ್ಧ ದೂರು ದಾಖಲಿಸಿದ್ದರಿಂದ ಅಸಮಾಧಾನಗೊಂಡಿದ್ದ ಪತ್ನಿ ಹಾಗೂ ಅವರ ಕುಟುಂಬದವರು ಕೊಲೆಗೆ ಸಂಚು ರೂಪಿಸಿದ್ದರು. ದಾಳಿಕೋರರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ರಾಜೀವ್ ಬರೇಲಿಯ ನವೋದಯ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, 2009 ರಲ್ಲಿ ಸಾಧನಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಯಶ್ (14) ಮತ್ತು ಲವ್ (8), ಇಬ್ಬರು ಮಕ್ಕಳಿದ್ದು, ಖಾಸಗಿ ಶಾಲೆಯಲ್ಲಿ ಓದುತ್ತಾರೆ. ಹಳ್ಳಿಯಲ್ಲಿ ಕುಟುಂಬ ವಾಸವಾಗಿದ್ದು, ಹಳ್ಳಿ ಜೀವ ಇಷ್ಟಪಡದ ಪತ್ನಿ ಸಿಟಿಯಲ್ಲಿ ಬಾಡಿಗೆ ಮನೆ ಪಡೆದು ಜೀವನ ನಡೆಸುತ್ತಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments