Thursday, May 14, 2026
Google search engine
Homeಕ್ರೀಡೆ52 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ!

52 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ!

ಭಾರತದ ಯುವ ಸ್ಫೋಟಕ ಬ್ಯಾಟ್ಸ್ ಮನ್ 14 ವರ್ಷದ ವೈಭವ್ ಸೂರ್ಯವಂಶಿ 19 ವರ್ಷದೊಳಗಿನವರ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಕಿರಿಯರ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದಾರೆ. ಈ ಹಿಂದೆ ಪಾಕಿಸ್ತಾನದ ಕಮ್ರಾಮ್ ಗುಲ್ಹಾಮ್ 53 ಎಸೆತಗಳಲ್ಲಿ ಬಾರಿಸಿದ್ದ ಶತಕದ ದಾಖಲೆಯನ್ನು ವೈಭವ್ ಮುರಿದರು.

ವೈಭವ್ ಸೂರ್ಯವಂಶಿಯ ಸಿಡಿಲಬ್ಬರದ ಆಟ ಶತಕಕ್ಕೆ ಸೀಮಿತಗೊಳ್ಳಲಿಲ್ಲ. ಬದಲಿಗೆ 78 ಎಸೆತಗಳಲ್ಲಿ 143 ರನ್ ಸಿಡಿಸಿದರು. ಆದರೆ ಕೇವಲ 7 ರನ್ ನಿಂದ 150 ರನ್ ಪೂರೈಸುವ ಅವಕಾಶದಿಂದ ವಂಚಿತರಾದರು. ಬೆನ್ ಮೇಯೆಸ್ ಎಸೆತದಲ್ಲಿ ಔಟಾಗುವ ಮುನ್ನ ವೈಭವ್ 13 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸಿದರು.

ಇದಕ್ಕೂ ಹಿಂದಿನ ಪಂದ್ಯದಲ್ಲಿ ವೈಭವ್ 20 ಎಸೆತಗಳಲ್ಲಿ ಅರ್ದಶತಕ ಬಾರಿಸಿ ರಿಷಭ್ ಪಂತ್ ದಾಖಲೆ ಮುರಿಯುವಲ್ಲಿ ಎಡವಿದ್ದರು. ಪಂತ್ 18 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ಅತೀ ವೇಗದ ಅರ್ದಶತಕದ ದಾಖಲೆ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments