Tuesday, May 26, 2026
Google search engine
Homeಅಪರಾಧಯೂಟ್ಯೂಬ್ ನೋಡಿ 140 ಮನೆಗೆ ಕನ್ನ ಹಾಕಿದ ಕಿಲಾಡಿ ಕಳ್ಳ!

ಯೂಟ್ಯೂಬ್ ನೋಡಿ 140 ಮನೆಗೆ ಕನ್ನ ಹಾಕಿದ ಕಿಲಾಡಿ ಕಳ್ಳ!

ಯೂಟ್ಯೂಬ್ ನೋಡಿ ಹೊಸ ಮಾದರಿಯಲ್ಲಿ ಕಳ್ಳತನ ಮಾಡುವುದನ್ನು ಕಲಿತು ಬೆಂಗಳೂರಿನಲ್ಲಿ 140ಕ್ಕೂ ಹೆಚ್ಚು ಕಳ್ಳತನ ಮಾಡಿದ್ದ ಕಿಲಾಡಿ ಕಳ್ಳನನ್ನು ಬೆಂಗಳೂರಿನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ (43) ಎಂಬಾತನನ್ನು ಬಂಧಿಸಲಾಗಿದ್ದು, 779 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಉತ್ತರಹಳ್ಳಿಯಲ್ಲಿ ಪತ್ನಿ ಮನೆಯಲ್ಲಿ ವಾಸವಾಗಿದ್ದ ಬಾಲಾಜಿ ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಹೊಸ ಹೊಸ ತಂತ್ರಗಳನ್ನು ಕಲಿಯುತ್ತಿದ್ದ.

ಆರೋಪಿ ಪ್ರಕಾಶ್ ಕೀ ಮಾಡುವ ಮಷಿನ್ ಅನ್ನು ಆನ್ ಲೈನ್ನಲ್ಲಿ ಖರೀದಿಸಿದ್ದು, ಅಪಾರ್ಟ್ಮೆಂಟ್ ಖರೀದಿ ಮಾಡುವ ನೆಪದಲ್ಲಿ ತೆರಳಿ ಕೀಗಳನ್ನು ನಕಲಿ ಮಾಡಿಕೊಳ್ಳುತ್ತಿದ್ದ. ಕಳ್ಳತನಕ್ಕೆ ಮಹಿಳೆಯರ ಚಪ್ಪಲಿ ಇರುವ ಮನೆಗಳನ್ನೇ ಗುರಿಯಾಗಿಸಿಕೊಂಡಿದ್ದ.

ಕಳ್ಳತನ ಮಾಡಿದ ನಂತರ ಕದ್ದ ವಸ್ತುಗಳನ್ನು ಸ್ವಿಗ್ಗಿ, ಜೊಮ್ಯಾಟೋ ಬ್ಯಾಗ್ನಲ್ಲಿ ಹಾಕಿಕೊಂಡು ಡೆಲಿವರಿ ಬಾಯ್ನಂತೆ ಪರಾರಿಯಾಗುತ್ತಿದ್ದ. ನಂತರ ಈ ಚಿನ್ನಾಭರಣವನ್ನು ರಾಜೀವ್ ಎಂಬಾತನಿಂದ ಮಾರಾಟ ಮಾಡಿಸುತ್ತಿದ್ದ.

ಪ್ರಕಾಶ್ ಬಾಲ್ಯದಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದಿದ್ದ. ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಪ್ರಕಾಶ್ ಸಣ್ಣ ವಯಸ್ಸಿನಲ್ಲೇ ಕಳ್ಳತನಕ್ಕೆ ಇಳಿದಿದ್ದ.

ಬೆಟ್ಟಿಂಗ್, ಮದ್ಯಪಾನ, ಗಾಂಜಾ, ಹುಡುಗಿಯರ ಶೋಕಿಗೆ ಬಿದ್ದಿದ್ದ ಪ್ರಕಾಶ್ ಕಳೆದ ವರ್ಷ ಮೇ 16 ರಂದು ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಬಿಡುಗಡೆಯಾಗಿ ಬಂದ ಬಳಿಕ ಮತ್ತೆ 13 ಮನೆಗಳಲ್ಲಿ ಕಳ್ಳತನ ಮಾಡಿದ್ದ. ಆರೋಪಿ ಪ್ರಕಾಶ್ ಬಂಧನಕ್ಕೆ ನಗರದ ವಿವಿಧ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೊಲೀಸರ ಕಣ್ತಪ್ಪಿಸಿಕೊಳ್ಳಲು ಆರೋಪಿ ಪ್ರಕಾಶ್ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ, ಮಡಿವಾಳ ಠಾಣೆ ಪೊಲೀಸರು ಪ್ರಕಾಶ್ನ ಪತ್ನಿ ಮತ್ತು ಕುಟುಂಬಸ್ಥರ ಫೋನ್ ಟ್ರ್ಯಾಕ್ ಮಾಡಿದಾಗ ಅತ್ತಿಬೆಲೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಆರೋಪಿ ಪ್ರಕಾಶ್ ಮಡಿವಾಳದಲ್ಲಿ ಮತ್ತು ಹುಳಿಮಾವುನಲ್ಲಿ ತಲಾ ಮೂರು ಕಡೆ ಕಳ್ಳತನ ಮಾಡಿದ್ದಾನೆ. ಮೈಕೋಲೇ ಔಟ್, ಬಂಡೆಪಾಳ್ಯ, RR ನಗರ, ಸುಬ್ರಹ್ಮಣ್ಯಪುರ, ಹೆಚ್ಎಸ್ಆರ್ ಲೇಔಟ್, ಬೇಗೂರು ಈ ಎಲ್ಲ ನಗರಗಳಲ್ಲಿ ಆರೋಪಿ ಪ್ರಕಾಶ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯಿಂದ 80 ಲಕ್ಷ ಮೌಲ್ಯದ 779 ಗ್ರಾಂ ಚಿನ್ನಾಭರಣ ಮತ್ತು ಎರಡು ಬೈಕ್ಗಳು, ಕೃತ್ಯಕ್ಕೆ ಬಳಸಿದ್ದ 130 ನಕಲಿ ಕೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ಮತ್ತು ರಾಜೀವ್ ವಿರುದ್ಧ ಮಡಿವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments