ಮೇಷ ರಾಶಿ
ಆರೋಗ್ಯ **
ಪ್ರಯಾಣ ***
ಕೆಲಸ **
ಅದೃಷ್ಟ ಸಂಬಂಧ **
ಹಣಕಾಸು **
ಅಧ್ಯಯನ **
ಅದೃಷ್ಟ ಸಂಖ್ಯೆ 01
ಭವಿಷ್ಯ
ಈ ವಾರ ಕೆಲಸವು ತಲೆನೋವು ಮತ್ತು ದೈಹಿಕ ನೋವು ಕೊಡಬಹುದು. ಕೆಲವರಿಗೆ ಅನಗತ್ಯ ವಾದ ಅಥವಾ ಅಹಿತಕರ ಘಟನೆ ಎದುರಾಗಬಹುದು. ಪ್ರಯಾಣ ಯೋಜನೆಯಲ್ಲಿ ವಿಳಂಬ. ವ್ಯವಹಾರ ಒಪ್ಪಂದಗಳಲ್ಲಿ ಸಿಲುಕಿಕೊಳ್ಳಬಹುದು ಅಥವಾ ಒತ್ತಡ ಸೃಷ್ಟಿಸಬಹುದು. ಗೃಹಿಣಿಯರು ಈ ವಾರ ಕುಟುಂಬ ಸದಸ್ಯರೊಂದಿಗೆ ವಾದ ನಡೆಸಬಹುದು. ವಿದ್ಯಾರ್ಥಿಗಳಿಗೆ ಈ ವಾರ ಶೈಕ್ಷಣಿಕ ಅಥವಾ ವೃತ್ತಿ ಮಾರ್ಗ ಆಯ್ಕೆ ಮಾಡಿಕೊಳ್ಳುವಾಗ ಒತ್ತಡವನ್ನು ಎದುರಿಸುವ ಸಾಧ್ಯತೆ ಇದೆ.
ಶಿಫಾರಸು
ಈ ವಾರ ಅನುಕೂಲಕರವಾಗಿಲ್ಲದ ಕಾರಣ ತಾಳ್ಮೆಯಿಂದ ಇರಲು ಪ್ರಯತ್ನಿಸಿ. ಆರಾಮವಾಗಿ ಇರಲು ಪ್ರಯತ್ನಿಸಿ. ಯಾವುದೇ ಹೂಡಿಕೆಗಳು ಅಥವಾ ಹೊಸ ವಸ್ತು ಖರೀದಿ ಮುಂದೂಡಿ. ಶಾಂತವಾಗಿರಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಬಿಳಿ ಬಣ್ಣದ ಬಟ್ಟೆ ಧರಿಸಿ. ದಿನದ ಯಾವುದೇ ಸಮಯದಲ್ಲಿ ದೀಪ ಹಚ್ಚಿ ಅದರ ಮುಂದೆ 5 ನಿಮಿಷ ಕಾಲ ಕುಳಿತುಕೊಳ್ಳಿ.
ವೃಷಭ ರಾಶಿ
ಆರೋಗ್ಯ ***
ಪ್ರಯಾಣ ****
ಕೆಲಸ ***
ಅದೃಷ್ಟ ಸಂಬಂಧ ****
ಹಣಕಾಸು ***
ಅಧ್ಯಯನ ***
ಅದೃಷ್ಟ ಸಂಖ್ಯೆ 01
ಭವಿಷ್ಯ
ನಕ್ಷತ್ರಗಳ ಪ್ರಕಾರ ಆರೋಗ್ಯ ಸರಾಸರಿ ಇರಲಿದೆ. ಬಡ್ತಿಯಲ್ಲಿ ವಿಳಂಬ ಹತಾಶೆ ಮತ್ತು ಸ್ವಯಂ ಅನುಮಾನ ಉಂಟು ಮಾಡಬಹುದು. ನೀವು ಏನನ್ನಾದರೂ ಅಥವಾ ಯಾರನ್ನಾದರೂ ಕಳೆದುಕೊಳ್ಳಬಹುದು. ನಿಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಗೃಹಿಣಿಯರು ಈ ವಾರ ಸರಿಯಾದ ಮನಸ್ಥಿತಿಯಲ್ಲಿ ಇಲ್ಲದೇ ಇರಬಹುದು. ವಿದ್ಯಾರ್ಥಿಗಳಿಗೆ ಪ್ರಮುಖ ಬದಲಾವಣೆ ನಿರೀಕ್ಷಿಸಬಹುದು. ಪ್ರಯಾಣಕ್ಕೆ ಸಕಾರತ್ಮಕ ವಾರ.
ಶಿಫಾರಸು
ಹೂಡಿಕೆ ಮಾಡುವ ಅಥವಾ ಖರೀದಿಸುವ ಮೊದಲು ಮೂರು ಬಾರಿ ಯೋಚಿಸಿ. ನಿಮ್ಮ ಕಠಿಣ ಪರಿಶ್ರಮ ಮುಂದುವರಿಸಿ. ಅದು ಫಲ ನೀಡುತ್ತದೆ. ಸಕರಾತ್ಮಕ ಯೋಚನೆ ಮತ್ತು ಭಯವನ್ನು ಕಾಗದದ ಮನೇಲೆ ಬರೆದು ಹರಿದು ಹಾಕಿ. ಈ ವಾರ ಯಾವುದಾದರೂ ಆಧ್ಯಾತ್ಮಿಕ ಪುಸ್ತಕ ಓದಿ.
ಮಿಥುನ
ಆರೋಗ್ಯ ****
ಪ್ರಯಾಣ ****
ಕೆಲಸ ***
ಅದೃಷ್ಟ ಸಂಬಂಧ ******
ಹಣಕಾಸು ***
ಅಧ್ಯಯನ ***^
ಅದೃಷ್ಟ ಸಂಖ್ಯೆ 05
ಭವಿಷ್ಯ
ನಿಧಾನ ಮತ್ತು ಸ್ಥಿರವಾದ ವಾರ. ಏಕೆಂದರೆ ಯಾರಾದರೂ ನಿಮ್ಮ ಬಳಿಗೆ ಪ್ರಮುಖ ವಿಷಯದ ಮೇಲೆ ಚರ್ಚಿಸಲು ಬರುತ್ತಾರೆ. ವಿದ್ಯಾರ್ಥಿ ಜೀವನವು ಸಕಾರಾತ್ಮಕ ತಿರುವು ಪಡೆಯುತ್ತದೆ. ಈ ವಾರ ನೆಚ್ಚಿನ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಸಂಬಂಧಗಳನ್ನು ಕಾಪಾಡಿಕೊಳ್ಳಲು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು.
ಶಿಫಾರಸು
ನಿಮ್ಮ ಕನಸುಗಳ ಕಡೆ ಗಮನ ಹರಿಸಿ. ಆತ್ಮವಿಶ್ವಾಸದಿಂದ ಇದ್ದು ಸಕಾರಾತ್ಮಕವಾಗಿ ಯೋಚಿಸಿ. ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಬೇಡ. ವಾರಕ್ಕೆ 2 ಬಾರಿ ಉಪ್ಪು ನೀರಿನಿಂದ ನೆಲ ಸ್ವಚ್ಛಗೊಳಿಸಿ. ನಿಮ್ಮ ನೆಚ್ಚಿನ ದೇವರನ್ನು ಜಪಿಸಿ ಸಾಧ್ಯವಾದರೆ ದೇವಸ್ಥಾನಕ್ಕೆ ಭೇಟಿ ನೀಡಿ.
ಕರ್ಕಾಟಕ
ಆರೋಗ್ಯ ***
ಪ್ರಯಾಣ ****
ಕೆಲಸ **
ಅದೃಷ್ಟ ಸಂಬಂಧ ******
ಹಣಕಾಸು **
ಅಧ್ಯಯನ **
ಅದೃಷ್ಟ ಸಂಖ್ಯೆ 01
ಭವಿಷ್ಯ
ವೃತ್ತಿಯಲ್ಲಿ ಮೂರ್ಖರಾಗುತ್ತೀರಿ. ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ದೊಡ್ಡದಾಗಿ ಅಲ್ಲ. ವಾರಾಂತ್ಯಕ್ಕೆ ವಿಹಾರಕ್ಕೆ ಹೋಗಬಹುದು. ಗೃಹಿಣಿಯರು ಅತ್ತೆ-ಮಾವ ಅವರಿಂದ ಅಪಹಾಸ್ಯಕ್ಕೆ ಒಳಗಾಗಬಹುದು. ಕೆಲವರಿಗೆ ಮದುವೆಯ ಪ್ರಸ್ತಾಪಗಳು ಬರಬಹುದು.
ಆದರೆ ಮದುವೆ ನಿಶ್ಚಯ ಆಗುವುದು ಅನುಮಾನ.
ಶಿಫಾರಸು
ಎಲ್ಲಾ ದಿನಗಳು ಒಂದೇ ಆಗಿರುವುದಿಲ್ಲ ಎಂಬುದನ್ನು ನೆನಪಿಡಿ. ಮನಸ್ಸು ಶಾಂತವಾಗಿರಲು ಪ್ರತಿದಿನ ನಡೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಪ್ರತಿದಿನ ಸಮಯ ಸಿಕ್ಕಾಗಲೆಲ್ಲಾ ಭಗವದ್ಗಿತೆಯ ಕನಿಷ್ಠ ಒಂದು ಅಧ್ಯಾಯ ಓದಿ. ಶೀಘ್ರದಲ್ಲೇ ಜೀವನದಲ್ಲಿ ಆಗುವ ಬದಲಾವಣೆ ನಿರೀಕ್ಷಿಸಿ. ಕಣ್ಣಿನ ಸುತ್ತಲೂ ಕಾಜಲ್ ಬಳಸಿ. ಇದು ಗ್ರಹಗಳ ಕೆಟ್ಟ ಮತ್ತು ನಕಾರಾತ್ಮಕ ಪ್ರಭಾವದಿಂದ ರಕ್ಷಿಸುತ್ತದೆ.
ಸಿಂಹ ರಾಶಿ
ಆರೋಗ್ಯ ****
ಪ್ರಯಾಣ *****
ಕೆಲಸ ***
ಅದೃಷ್ಟ ಸಂಬಂಧ *****
ಹಣಕಾಸು ***
ಅಧ್ಯಯನ ****
ಅದೃಷ್ಟ ಸಂಖ್ಯೆ 09
ಭವಿಷ್ಯ
ಆರೋಗ್ಯದಲ್ಲಿ ಉತ್ತಮ ಮತ್ತು ಪ್ರಯಾಣಿಸಲು ಉತ್ತಮ ದಿನಗಳು. ಕೆಲವರಿಗೆ ಹೊಸ ಸಂಬಂಧಗಳು ಬರಬಹುದು. ಕೆಲವು ಒಪ್ಪಂದಗಳು ಸರಿಯಾಗಲಿ ಎಂದು ಕಾಯಬಹುದು. ಶಾಪಿಂಗ್ ಹೋಗುವ ಸಾಧ್ಯತೆ ಇದೆ. ರಿಯಾಯಿತಿಗಳಿಂದಾಗಿ ಹೆಚ್ಚು ಖರ್ಚು ಆಗಬಹುದು. ವಿದ್ಯಾರ್ಥಿಗಳು ಮತ್ತು ಗೃಹಿಣಿಯರಿಗೆ ಒಳ್ಳೆಯ ದಿನಗಳು.
ಶಿಫಾರಸು
ಭಾವಾನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಅನಗತ್ಯ ವಿಷಯಗಳಲ್ಲಿ ಭಾಗಿಯಾಗಬೇಡಿ. ಪ್ರತಿದಿನ ಭಗವದ್ಗಿತೆ ಓದಿ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಿ. ಈ ವಾರ ಯಾರಿಗೂ ಹಣ ಕೊಡಬೇಡಿ. ಮನೆಯ ದಕ್ಷಿಣ ದಿಕ್ಕಿನಲ್ಲಿ ಬೆಳಿಗ್ಗೆ ಮತ್ತು ಸಂಜೆ ಕರ್ಪೂರವನ್ನು ಸುಟ್ಟು ಹಾಕಿ.
ಕನ್ಯಾ ರಾಶಿ
ಆರೋಗ್ಯ ***
ಪ್ರಯಾಣ ***
ಕೆಲಸ ***
ಅದೃಷ್ಟ ಸಂಬಂಧ ***
ಹಣಕಾಸು ***
ಅಧ್ಯಯನ ***
ಅದೃಷ್ಟ ಸಂಖ್ಯೆ 01
ಭವಿಷ್ಯ
ನಕ್ಷತ್ರಗಳ ಪ್ರಕಾರ ಈ ವಾರ ಸರಾಸರಿ ಆಗಿರಲಿದೆ. ಕೆಲವು ಸುದ್ದಿಗಳಿಗಾಗಿ ಅಥವಾ ವಿಷಯಗಳಿಗಾಗಿ ಕಾಯುತ್ತಿರುತ್ತೀರಿ. ನಿಮ್ಮ ಮೇಲೆ ಮದುವೆಗೆ ಒತ್ತಡಗಳು ಕೇಳಿ ಬರಬಹುದು. ಅಲರ್ಜಿ ಸಮಸ್ಯೆಗಳು ಕಾಡಬಹುದು. ವೃತ್ತಿಜೀವನದಲ್ಲಿ ಸರಾಸರಿ ಇರಲಿದೆ.
ಶಿಫಾರಸು
ಯಾವುದಕ್ಕೂ ಹೋಗದೇ ನಿರ್ಲಿಪ್ತರಾಗಿ ಇರು. ನೀರಿನಿಂದ ದೂರವಿರಿ. ಯಾವುದೇ ಕೆಲಸಕ್ಕೂ 1 ಸಂಖ್ಯೆಗೆ ಆದ್ಯತೆ ಇದೆ. ಪಾರಿಜಾತ ಗಿಡವನ್ನು ಮನೆಗೆ ತಂದು ಈಶಾನ್ಯ ದಿಕ್ಕಿನಲ್ಲಿ ಇರಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಅದಕ್ಕೆ ನೀರು ಹಾಕುವುದನ್ನು ಮರೆಯಬೇಡಿ.
ತುಲಾ ರಾಶಿ
ಆರೋಗ್ಯ ***
ಪ್ರಯಾಣ ***
ಕೆಲಸ ***
ಅದೃಷ್ಟ ಸಂಬಂಧ ***
ಹಣಕಾಸು ***
ಅಧ್ಯಯನ ***
ಅದೃಷ್ಟ ಸಂಖ್ಯೆ 01
ಭವಿಷ್ಯ
ಗೃಹ ಸ್ಥಾನದಲ್ಲಿನ ಗೃಹಗಳ ಬದಲಾವಣೆಗಳಿಂದ ನೀವು ಸಾಕಷ್ಟು ಏರಿಳಿತಗಳನ್ನು ಕಾಣಬಹುದು. ಈ ವಾರ ವೃತ್ತಿಜೀವನ ಬದಲಾಯಿಸುವ ಬಗ್ಗೆ ಯೋಚನೆ ಮಾಡಬಹುದು. ಬುಧವಾರದವರೆಗೆ ಒಂಟಿತನ ಅನುಭವಿಸಬಹುದು. ಅನಿರೀಕ್ಷಿತ ಪ್ರವಾಸಗಳಿಂದ ಹೊಸ ಸವಾಲುಗಳನ್ನು ಎದುರಾಗಬಹುದು. ಜೊತೆಗೆ ಅನಿರೀಕ್ಷಿತ ಪ್ರತಿಫಲಗಳನ್ನು ಕಾಣಬಹುದು. ಈ ವಾರ ಸಂಬಂಧಕ್ಕೆ ಹೆಚ್ಚಿನ ಗಮನ ಹಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಸ್ಥಿತವಾಗಿ ಇರಲಿದೆ.
ಶಿಫಾರಸು
ಸ್ವಲ್ಪ ವಿರಾಮ ತೆಗೆದುಕೊಂಡು ನಿಮ್ಮ ಆಸಕ್ತಿಯ ವಿಷಯಗಳ ಕಡೆ ಗಮನ ಹರಿಸಿ. ಪೂಜಾ ಸ್ಥಳದಲ್ಲಿ ದೀಪ ಬೆಳಗಿಸಿ ಧೂಪದ್ರವ್ಯ ಸುಟ್ಟುಹಾಕಿ. ಆರೋಗ್ಯ ಸಮಸ್ಯೆಗಳಿದ್ದರೆ ಉತ್ತಮ ಆಹಾರ ಮತ್ತು ಔಷಧ ಕಡೆ ಗಮನಹರಿಸಿ. ಅದೃಷ್ಟದ ಬಟ್ಟೆಗಳನ್ನು ಧರಿಸುವತ್ತ ಗಮನ ಹರಿಸಿ.
ವೃಶ್ಚಿಕ ರಾಶಿ
ಆರೋಗ್ಯ ****
ಪ್ರಯಾಣ ***
ಕೆಲಸ ****
ಅದೃಷ್ಟ ಸಂಬಂಧ ******
ಹಣಕಾಸು ****
ಅಧ್ಯಯನ ****
ಅದೃಷ್ಟ ಸಂಖ್ಯೆ 09
ಭವಿಷ್ಯ
ಈ ವಾರ ಸ್ಥಿರತೆ ನಿರೀಕ್ಷಿಸಬಹುದು. ಪ್ರೀತಿಪಾತ್ರರಿಗೆ ಭಾವನೆಗಳನ್ನು ವ್ಯಕ್ತಪಡಿಸಬಹುದು. ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನ ಹರಿಸಬಹುದು. ಹಳೆಯ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳುತ್ತಾರೆ. ವೃತ್ತಿಪರ ಕಾರಣಗಳಿಗಾಗಿ ವರ್ಗಾವಣೆ ಆಗಬಹುದು ಹಣಕಾಸಿನ ವಿಷಯದಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಆದರೆ ದೊಡ್ಡದಾಗಿ ಅಲ್ಲ.
ಶಿಫಾರಸು
ಹೊಸ ಚಟುವಟಿಕೆಗಳನ್ನು ಅನ್ವೇಷಿಸಲು ಬಿಡುವಿನ ಸಮಯ ಬಳಸಿಕೊಳ್ಳಿ. ಈ ಮಂಗಳವಾರ ಗಣೇಶನಿಗೆ ಮೋದಕ ಮತ್ತು ದೂರ್ವಾ ಹುಲ್ಲಿ ಅರ್ಪಿಸಿ. ಮತ್ತು ಓಂ ಗಂ ಗಣಪತಯೇ ನಮಃ ಎಂದು ಜಪಿಸಿ. ವಾಹನ ಚಲಾಯಿಸುವಾಗ ಹೆಚ್ಚು ಜಾಗರೂಕರಾಗಿ ಸಂಚಾರ ನಿಯಮ ಅನುಸರಿಸುವ ಮೂಲಕ ಸಂಭಾವ್ಯ ಅಪಘಾತ ತಪ್ಪಿಸಿ.
ಧನು ರಾಶಿ
ಆರೋಗ್ಯ ****
ಪ್ರಯಾಣ ****
ಕೆಲಸ ***
ಅದೃಷ್ಟ ಸಂಬಂಧ ***
ಹಣಕಾಸು ***
ಅಧ್ಯಯನ ***
ಅದೃಷ್ಟ ಸಂಖ್ಯೆ 03
ಭವಿಷ್ಯ
ನಕ್ಷತ್ರಗಳ ಪ್ರಕಾರ ಈ ವಾರ ಸಮತೋಲನ ಇರಲಿದೆ. ಉದ್ಯೋಗ ಸಂದರ್ಶನಕ್ಕೆ ಪ್ರಯತ್ನಿಸುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು. ಫಿಟ್ನೆಸ್ ನತ್ತ ಹೆಚ್ಚು ಗಮನ ಹರಿಸಬಹುದು. ಕೆಲಸದಲ್ಲಿ ಸುಧಾರಣೆ, ಕಾರ್ಯಕ್ಷಮತೆ ಗುರುತಿಸಿ ಹೊಸ ಅವಕಾಶಗಳಿಗೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಯಾವುದೇ ಹೊಸ ಬದಲಾವಣೆಗಳಿಲ್ಲ. ಗೃಹಿಣಿಯರು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು.
ಶಿಫಾರಸು
ಈ ವಾರ ಲಿಚಿ ಮತ್ತು ಸಪೋಟಾ ಸೇವಿಸಿ ಅಥವಾ ಜ್ಯೂಸ್ ಸೇವಿಸಿ. ರಜೆ ಅಥವಾ ಹೊರಗೆ ಭೋಜನ ಬಗ್ಗೆ ಯೋಚಿಸಿ. ಸಮೀಪದ ಶಿವನ ದೇವಾಲಯಕ್ಕೆ ಭೇಟಿ ನೀಡಿ ಸೋಮವಾರ ಉಪವಾಸ ಮಾಡಿದರೆ ಪ್ರಗತಿ ಕಾಣಬಹುದು. ಯಾರ ವೈಯಕ್ತಿಕ ವಿಷಯದಲ್ಲೂ ಮೂಗು ತೂರಿಸಬೇಡಿ.
ಮಕರ ರಾಶಿ
ಆರೋಗ್ಯ ****
ಪ್ರಯಾಣ ***
ಕೆಲಸ **
ಅದೃಷ್ಟ **
ಸಂಬಂಧ **
ಹಣಕಾಸು *
ಅಧ್ಯಯನ **
ಅದೃಷ್ಟ ಸಂಖ್ಯೆ 01
ಭವಿಷ್ಯ
ಈ ವಾರ ಕಠಿಣವಾಗಿ ಇರಲಿದೆ. ನಿಮ್ಮ ಯೋಜನೆಗಳು ಬದಲಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮವಾಗಿದ್ದಕ್ಕೆ ಕಾರಣವಾಗಬಹುದು. ಗೃಹಿಣಿಯರು ಪ್ರೀತಿಪಾತ್ರರು ಅಥವಾ ನೆರೆಹೊರೆಯವರೊಂದಿಗೆ ಜಗಳ ಆಗಬಹುದು. ನೀವು ಮತ್ತು ಸಂಗಾತಿ ಪ್ರಮುಖ ಸವಾಲು ಎದುರಿಸಬಹುದು. ಆದರೆ ವಿಷಯಗಳು ಸರಿಯಾಗಿರುತ್ತದೆ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಗಮನ ಹರಿಸಲು ಕಷ್ಟಪಡುತ್ತಾರೆ.
ಶಿಫಾರಸು
ಈ ವಾರ ಹೊಸ ಯೋಜನೆಗಳನ್ನು ಪ್ರಾರಂಭಿಸದೇ ಮುಂದೂಡಲು ಪ್ರಯತ್ನಿಸಿ. ಇದರಿಂದ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು. ಏಕೆಂದರೆ ಅದೃಷ್ಟ ನಿಮ್ಮ ಪರವಾಗಿ ಇರುವುದಿಲ್ಲ. ಪ್ರಯಾಣ ಮಾಡುವಾಗ ಸಾಧ್ಯವಾದಷ್ಟು ಅದೃಷ್ಟ ಬಣ್ಣದ ವಸ್ತ್ರ ಧರಿಸಿ ಗಾಢ ಬಣ್ಣದ ವಸ್ತ್ರ ಧರಿಸುವುದನ್ನು ತಪ್ಪಿಸಿ. ಮಂಗಳವಾರ ಮತ್ತು ಶನಿವಾರ ಉಪವಾಸ ಮಾಡಿ ಹನುಮ ಚಾಲೀಸ ಪಠಿಸಿ.
ಕುಂಭ ರಾಶಿ
ಆರೋಗ್ಯ **
ಪ್ರಯಾಣ **
ಕೆಲಸ ***
ಅದೃಷ್ಟ ಸಂಬಂಧ ***
ಹಣಕಾಸು ***
ಅಧ್ಯಯನ ****
ಅದೃಷ್ಟ ಸಂಖ್ಯೆ 01
ಭವಿಷ್ಯ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಯಾವುದೇ ಏರುಪೇರುಗಳಿರುವುದಿಲ್ಲ. ಕೆಲವರು ಕೆಲವು ವಿಷಯಗಳಲ್ಲಿ ನಿಮ್ಮನ್ನು ಗೊಂದಲಗೊಳಿಸಲು ಪ್ರಯತ್ನಿಸಬಹುದು. ಆದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆರೋಗ್ಯ ಉತ್ತಮವಾಗಿ ಇರುತ್ತದೆ. ಸಾಧ್ಯವಾದರೆ ಬಿಡುವು ಮಾಡಿಕೊಂಡು ಹೊಸತನದ ಬಗ್ಗೆ ಆಲೋಚಿಸಬಹುದು. ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಶೈಕ್ಷಣಿಕ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಗೃಹಿಣಿಯರ ಜೀವನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಶಿಫಾರಸು
ಯಾವುದೇ ಬದ್ಧತೆ ಅಥವಾ ಸಹಿ ಹಾಕುವ ಮುನ್ನ ಮೂರು ಬಾರಿ ಯೋಚಿಸಿ ತೀರ್ಮಾನಿಸಿ. ಇದರಿಂದ ಸಂಭಾವ್ಯ ಸಮಸ್ಯೆ ತಪ್ಪಿಸಬಹುದು. ಉತ್ತಮ ಫಲಿತಾಂಶಕ್ಕಾಗಿ ಒಂದು ವಿಷಯದ ಮೇಲೆ ಏಕಾಗ್ರತೆ ವಹಿಸಿ. ಅದೃಷ್ಟಕ್ಕಾಗಿ ನಿಮ್ಮ ಮೇಜಿನ ಮೇಲೆ ಗಣೇಶನ ಸಣ್ಣ ವಿಗ್ರಹ ಇರಿಸಿ. ಪಕ್ಷಿ, ಪ್ರಾಣಿಗಳಿಗೆ ಆಹಾರ ನೀಡಿ. ಅಗತ್ಯ ಇರುವವರಿಗೆ ಆಹಾರ ಮತ್ತು ವಸ್ತ್ರಗಳನ್ನು ದಾನ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು.
ಮೀನ
ಆರೋಗ್ಯ ***
ಪ್ರಯಾಣ ****
ಕೆಲಸ ***
ಅದೃಷ್ಟ ಸಂಬಂಧ **
ಹಣಕಾಸು ***
ಅಧ್ಯಯನ ***
ಅದೃಷ್ಟ ಸಂಖ್ಯೆ 09
ಭವಿಷ್ಯ
ನಕ್ಷತ್ರಗಳ ಆಧಾರದ ಮೇಲೆ ಈ ವಾರ ಸರಾಸರಿ ಇರಲಿದೆ. ಕೆಲಸದ ಸ್ಥಳದಲ್ಲಿ ನಿರಾಸೆ ಎದುರಾಗಬಹುದು. ಆದರೆ ಅದು ದೊಡ್ಡ ಮಟ್ಟದಲ್ಲಿ ಇರುವುದಿಲ್ಲ. ಪ್ರಯಾಣದ ಯೋಜನೆಗಳು ಅಂದುಕೊಂಡಂತೆ ಆಗುವುದಿಲ್ಲ. ವಿಳಂಬ ಆಗಬಹುದು. ಆಕಸ್ಮಿಕ ಪ್ರಯಾಣ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಭವಿಷ್ಯದ ವೃತ್ತಿಜೀವನದ ಬಗ್ಗೆ ನಿರ್ಧರಿಸಲು ಸಾಧ್ಯವಾಗದೇ ಇರಬಹುದು. ಗೃಹಿಣಿಯರಿಗೆ ಭಾವನಾತ್ಮಕ ವಾರವಾಗಲಿದೆ.
ಶಿಫಾರಸು
ಯಾರನ್ನೂ ಕುರುಡಾಗಿ ನಂಬಬೇಡಿ. ನಿಮ್ಮ ಹಿಂದಿನ ತಪ್ಪುಗಳಿಂದ ಪಾಠ ಕಲಿಯಿರಿ. ಸ್ನಾನದ ನಂತರ ಜಪ ಮಾಡಿ. ಈ ವಾರ ಹಣಕಾಸಿನ ವಿಷಯದ ಕುರಿತ ತೀರ್ಮಾನಗಳನ್ನು ಮುಂದೂಡಿ. ಸಸ್ಯಹಾರ ಸೇವನೆಗೆ ಒತ್ತು ನೀಡಿ. ಹೆಚ್ಚಿನ ಪ್ರೋಟ್ರಿನ್ ಆಹಾರ ಸೇವಿಸಿ. ಹಾಸಿಗೆಯ ಬಳಿ ಯಾವುದೇ ಚೂಪಾದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ.
ಡಾ.ಎಂ.ಆರ್. ಸವಿತಾ, ಖ್ಯಾತ ಜ್ಯೋತಿಷಿ



