Monday, June 1, 2026
Google search engine
Homeದೇಶನಾನೇನು ದಿನಕ್ಕೊಂದು ಬಣ್ಣದ ಸೂಟ್ ಹಾಕುತ್ತಿದ್ದಿನಾ: ಮೋದಿಗೆ ವಿಜಯ್ ಪರೋಕ್ಷ ಟಾಂಗ್

ನಾನೇನು ದಿನಕ್ಕೊಂದು ಬಣ್ಣದ ಸೂಟ್ ಹಾಕುತ್ತಿದ್ದಿನಾ: ಮೋದಿಗೆ ವಿಜಯ್ ಪರೋಕ್ಷ ಟಾಂಗ್

ಚೆನ್ನೈ: ನಾನು ಮುಖ್ಯಮಂತ್ರಿ ಆದ ನಂತರ ಧರಿಸುತ್ತಿರುವ ಬಟ್ಟೆಯಂತೆ ನನ್ನ ಆಡಳಿತ ಕಪ್ಪು ಮತ್ತು ಬಿಳುಪಿನಿಂದ ಇರಲಿದೆ ಎಂದು ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ ಹೇಳಿದ್ದಾರೆ.

ತಿರುಚನಾಪಳ್ಳಿಯಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸುವ ರ್ಯಾಲಿಯಲ್ಲಿ ಸೋಮವಾರ ಪಾಲ್ಗೊಂಡಿದ್ದ ಅವರು, ಸೂಟ್ ಧರಿಸಿ ಅಧಿಕಾರ ನಡೆಸುವ ವಿಚಾರಕ್ಕೆ ಡಿಎಂಕೆ ಮಾಡಿದ ಆರೋಪಕ್ಕೆ ಅವರು ಉತ್ತರ ನೀಡಿದರು.

ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕಪ್ಪು ಬಿಳುಪಿನ ಸೂಟ್ ಧರಿಸುತ್ತಿರುವ ಬಗ್ಗೆ ಸಮರ್ಥನೆ ಮಾಡಿಕೊಂಡ ಅವರು, ನನ್ನ ಬಟ್ಟೆಯಂತೆ ಆಡಳಿತ ಕಪ್ಪು- ಬಿಳುಪಿನದ್ದಾಗಿರುತ್ತದೆ ಎಂದರು.

ಹಿಂದೆ ಎಂಜಿಆರ್ ನಡೆಸಿದ ಆಡಳಿತ ಮಾದರಿಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತರುತ್ತೇನೆ. ನಾವು ಧರಿಸುವ ಬಟ್ಟೆ ಚರ್ಚೆಯ ವಿಷಯ ಅಲ್ಲ. ನಾನು ಪ್ರತಿಷ್ಠೆಗಾಗಿ ಬಟ್ಟೆ ಧರಿಸುವುದಿಲ್ಲ ಎಂದು ಅವರು ಹೇಳಿದರು.

ನಾನು ಸೂಟ್ ಧರಿಸುವ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆ ಸೂಟ್ ಧರಿಸಬಾರದು ಎಂಬ ನಿಯಮ ಏನಾದರೂ ಇದೆಯಾ? ಅಧಿಕಾರಿಗಳು ಮಾತ್ರ ಸೂಟ್ ಧರಿಸಬೇಕು ಎಂಬುದು ಇದೆಯೇ ಆ ತರಹ ಏನೂ ಇಲ್ಲ ಎಂದು ಅವರು ಸಮರ್ಥಿಸಿಕೊಂಡರು.

ನಾನೇನು ದಿನಕ್ಕೊಂದು ಬಣ್ಣ ಬಣ್ಣದ ಸೂಟ್ ಧರಿಸುತ್ತಿದ್ದೆನಾ? ಕಪ್ಪು ಮತ್ತು ಬಿಳುಪಿನ ಬಟ್ಟೆ ಹಾಕುತ್ತಿದ್ದೇನೆ. ನಾನು ಕಪ್ಪು ಬಿಳುಪಿನ ರೀತಿ ನಡೆದುಕೊಳ್ಳುತ್ತೇನೆ ಎಂಬುದು ಅರ್ಥ ಮಾಡಿಸಲು ಅಷ್ಟೆ. ಆದರೆ ಕಪ್ಪು ಬಿಳುಪಿನ ಅರ್ಥ ನಿಮಗೆಲ್ಲಾ ಗೊತ್ತಿದೆಯಲ್ಲಾ ಎಂದು ವಿಜಯ್ ನುಡಿದರು.

ನಾನು ಧರಿಸುವ ಬಟ್ಟೆಯ ಬಗ್ಗೆ ಡಿಎಂಕೆ ಮತ್ತು ಎಐಎಡಿಎಂಕೆ ರಾಜಕೀಯ ಮಾಡುತ್ತಿದೆ. ನನ್ನ ಬಟ್ಟೆಯ ಬಗ್ಗೆ ಮಾತನಾಡುವ ಬದಲು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲಿ ಎಂದು ಅವರು ಸವಾಲು ಹಾಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments