Sunday, May 31, 2026
Google search engine
Homeಕಾನೂನುಮಾಂಗಲ್ಯ ಧರಿಸದ ಮಹಿಳೆ ಮೇಲೆ ಗಂಡ ಯಾಕೆ ಆಸಕ್ತಿ ತೋರಬೇಕು? ನ್ಯಾಯಾಧೀಶರ ಪ್ರಶ್ನೆ

ಮಾಂಗಲ್ಯ ಧರಿಸದ ಮಹಿಳೆ ಮೇಲೆ ಗಂಡ ಯಾಕೆ ಆಸಕ್ತಿ ತೋರಬೇಕು? ನ್ಯಾಯಾಧೀಶರ ಪ್ರಶ್ನೆ

ಮಾಂಗಲ್ಯ ಧರಿಸಲ್ಲ, ಸಿಂಧೂರ ಹಾಕದ ನಿನ್ನ ಮೇಲೆ ಗಂಡ ಯಾಕೆ ಬೇಕು ಎಂದು ಸೆಷನ್ಸ್ ನ್ಯಾಯಾಧೀಶರೊಬ್ಬರು ವಿಚ್ಚೇದನ ಅರ್ಜಿಯ ವಿಚಾರಣೆ ವೇಳೆ ಪತ್ನಿಯನ್ನು ಪ್ರಶ್ನಿಸಿದ್ದಾರೆ.

ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ದಂಪತಿಯ ಪುಣೆ ಮೂಲದ ವಕೀಲ ಅಂಕುರ್ ಆರ್. ಜಹಗೀರ್ದಾರ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಪತಿ ನನಗೆ ಬೇಕು. ನನ್ನ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ದೂರಿದ್ದ ಮಹಿಳೆಯನ್ನು ಗಮನಿಸಿದ ನ್ಯಾಯಾಧೀಶರು, ನೀನು ಮಾಂಗಲ್ಯ ಧರಿಸಿಲ್ಲ, ಸಿಂಧೂರ ಹಾಕದೇ ಇರುವುದನ್ನು ನಾನು ಗಮನಿಸಿದೆ. ನೀನು ಮದುವೆ ಆದ ಹೆಣ್ಣಿನಂತೆ ವರ್ತಿಸದೇ ಇದ್ದರೂ ನಿನ್ನ ಮೇಲೆ ಗಂಡ ಯಾಕೆ ಆಸಕ್ತಿ ತೋರಬೇಕು ಎಂದು ಪ್ರಶ್ನಿಸಿದರು.

ನ್ಯಾಯಾಧೀಶರ ಪ್ರಶ್ನೆ ಮಾಡಿದ ರೀತಿಯನ್ನು ವಕೀಲ ಪ್ರಶ್ನಿಸಿದ್ದು, ಈ ರೀತಿಯ ಪ್ರಶ್ನೆಗಳನ್ನು ಸಾಮಾನ್ಯವಾಗಿ ನ್ಯಾಯಾಲಯದಲ್ಲಿ ಕೇಳಲಾಗುತ್ತದೆ. ಶಿಕ್ಷಣ ಪಡೆದ ವಿದ್ಯಾವಂತರು ಈ ರೀತಿ ಕೇಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಸಂಪಾದನೆ ಮಾಡುವ ಮಹಿಳೆ ಗಂಡ ನನಗಿಂತ ಹೆಚ್ಚು ಸಂಪಾದನೆ ಮಾಡುವವನಾಗಿರಬೇಕು ಎಂದು ಬಯಸುತ್ತಾರೆ. ಸಂಪಾದನೆ ಮಾಡುವ ಗಂಡ ಮನೆ ಕೆಲಸ ಮಾಡುವ ಮಹಿಳೆಯನ್ನು ಮದುವೆ ಆಗಲು ಬಯಸುತ್ತಾನೆ ಎಂಬ ರೀತಿಯಲ್ಲಿ ಸಿವಿಲ್ ನ್ಯಾಯಾಧೀಶರು ವಿಚಾರಣೆ ಹೇಳಿಕೆಗಳನ್ನು ನೀಡುತ್ತಾರೆ. ಇದು ದೂರಿನ ವ್ಯಾಪ್ತಿಗೆ ಕೆಲವೊಮ್ಮೆ ಮೀರಿರುತ್ತದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments