ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಅಶ್ಲೀಲ ವೀಡಿಯೋ ವೀಕ್ಷಿಸುತ್ತಾ ಸಮಯ ಕಳೆದ ವಿಚಿತ್ರ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಗುಂಟೂರು ಜಿಲ್ಲೆಯ ಚಿಲುವೂರು ಗ್ರಾಮದಲ್ಲಿ ಪತ್ನಿ ಲಕ್ಷ್ಮಿ ಮಾಧುರಿ ಪ್ರಿಯಕರ ಗೋಪಿ ಜೊತೆ ಸೇರಿಕೊಂಡು ಪತಿ ಲೋಕಂ ಶಿವ ನಾಗರಾಜು ಅವರನ್ನು ಕೊಲೆಗೈದಿದ್ದಾಳೆ.
ಸಿನಿಮಾ ಥಿಯೇಟರ್ ನಲ್ಲಿ ಟಿಕೆಟ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಹಾಗೂ ಈರುಳ್ಳಿ ವ್ಯಾಪಾರಿಯಾದ ಗೋಪಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಲಕ್ಷ್ಮೀ ಹಾಗೂ ಪತಿ ನಾಗರಾಜುಗೆ ಇಬ್ಬರು ಮಕ್ಕಳು ಇದ್ದಾರೆ.
ಪತಿ ನಾಗರಾಜುಗೆ ಬಿರಿಯಾನಿಯಲ್ಲಿ 20 ನಿದ್ದೆ ಮಾತ್ರೆ ಬೆರೆಸಿ ನೀಡಿದ್ದು, ನಿದ್ದೆ ಮಂಪರಿನಲ್ಲಿದ್ದ ನಾಗರಾಜು ಎದೆಯ ಮೇಲೆ ಕುಳಿತ ಲಕ್ಷ್ಮೀ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಗಂಡ ಮೃತಪಟ್ಟಿರುವುದು ದೃಢಪಟ್ಟ ನಂತರ ಗೋಪಿ ಮಾಧುರಿಯನ್ನು ಅಲ್ಲೇ ಬಿಟ್ಟು ಅಲ್ಲಿಂದ ತೆರಳಿದರೆ ಶವದ ಪಕ್ಕದಲ್ಲೇ ಇದ್ದು ಮೊಬೈಲ್ ನಲ್ಲಿ ಬ್ಲೂ ಫಿಲಂ ನೋಡುತ್ತಾ ರಾತ್ರಿ ಕಳೆದಿದ್ದಾಳೆ.
ಮರುದಿನ ಮುಂಜಾನೆ 4 ಗಂಟೆಯ ಸುಮಾರಿಗೆ ಮಾಧುರಿ ನೆರೆಹೊರೆಯವರ ಬಳಿ ತೆರಳಿ ತನ್ನ ಪತಿ ನಾಗರಾಜು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಥೆಕಟ್ಟಿದ್ದಾಳೆ. ದಂಪತಿ ಮತ್ತು ಮಾಧುರಿಯ ವಿವಾಹೇತರ ಸಂಬಂಧದ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂಬುದನ್ನು ತಿಳಿದಿದ್ದ ನೆರೆಹೊರೆಯವರು ಮತ್ತು ಪರಿಚಯಸ್ಥರು ನಾಗರಾಜು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ನಾಗರಾಜು ಸ್ನೇಹಿತರು ನಾಗರಾಜು ಕಿವಿಯ ಬಳಿ ರಕ್ತದ ಕಲೆಗಳು ಹಾಗೂ ಆತನ ದೇಹದ ಮೇಲೆ ಕೆಲಗಾಯಗಳನ್ನು ಗಮನಿಸಿ ತಕ್ಷಣ ಆತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಮರಣೋತ್ತರ ಪರೀಕ್ಷೆಯಲ್ಲಿ ನಾಗರಾಜು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಲಾಯಿತು. ಅಲ್ಲದೇ ನಾಗರಾಜು ಎದೆಯ ಮೂಳೆಗಳಲ್ಲಿ ಮುರಿತಗಳು ಕಂಡುಬಂದಿದ್ದು, ಆತನ ಮೇಲೆ ದೈಹಿಕ ಹಲ್ಲೆಯಾಗಿದೆ ಎಂಬ ಅನುಮಾನಗಳನ್ನು ದೃಢಪಡಿಸಿತು.
ಪತಿಯನ್ನು ಕೊಂದ ಪತ್ನಿ ಮಾಧುರಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಮಾಧುರಿ ಅಪರಾಧವನ್ನು ಒಪ್ಪಿಕೊಂಡಿದ್ದು, ಗಂಡನನ್ನು ಕೊಂದ ನಂತರ ಅಶ್ಲೀಲ ವೀಡಿಯೊಗಳನ್ನು ನೋಡುತ್ತಾ ರಾತ್ರಿ ಕಳೆದಿದ್ದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.



