ಹೊಸ ವರ್ಷದಂದು ಸ್ವೀಟ್ ಕೊಡ್ತೀನಿ ಬಾ ಎಂದು ಕರೆದು ವಿವಾಹಿತ ಪ್ರಿಯಕರ ಮರ್ಮಾಂಗವನ್ನು ಮಹಿಳೆ ಕತ್ತರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
೨೫ ವರ್ಷದ ಪ್ರೇಯಸಿ ಹಾಗೂ 44 ವರ್ಷದ ಪ್ರಿಯಕರ ಇಬ್ಬರಿಗೂ ಮದುವೆ ಆಗಿದೆ. ಆದರೆ ಪತ್ನಿಯನ್ನು ತೊರೆದು ನನ್ನನ್ನು ಮದುವೆ ಆಗಬೇಕು ಎಂದು ಪ್ರೇಯಸಿ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದಾಳೆ.
ಪ್ರೇಯಸಿ ಕೊಟ್ಟ ಸಿಹಿ ತಿಂದು ಹೊಸ ವರ್ಷ ಸ್ವಾಗತಿಸುವ ಉತ್ಸಾಹದಲ್ಲಿ ಮನೆಗೆ ಬಂದಿದ್ದ ಪ್ರಿಯಕರ ಇದೀಗ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಿಯಕರನ ಸೋದರಿಯ ಸಂಬಂಧಿ ಆಗಿರುವ ಮಹಿಳೆ ಇಬ್ಬರೂ ಕಳೆದ 6-7 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಾರೆ. ಪತ್ನಿಯನ್ನು ತೊರೆದು ನನ್ನನ್ನು ಮದುವೆ ಆಗು ಎಂದು ಪ್ರೇಯಸಿ ಪೀಡಿಸುತ್ತಿದ್ದಳು. ಈ ವಿಷಯದಲ್ಲಿ ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು.
18 ವರ್ಷಗಳಿಂದ ಪತ್ನಿ ಜೊತೆ ಬೇರೆಡೆ ವಾಸವಾಗುತ್ತಿದ್ದ ಪ್ರಿಯಕರ ೨೦೨೫ರಲ್ಲಿ ಕುಟುಂಬದ ಜೊತೆ ಬಿಹಾರಕ್ಕೆ ವಲಸೆ ಹೋಗಿದ್ದರು. ಬಿಹಾರದಲ್ಲಿದ್ದರೂ ಪದೇಪದೆ ಕರೆ ಮಾಡಿ ಪ್ರಿಯಕರನಿಗೆ ಕರೆ ಮಾಡಿ ಮದುವೆ ಆಗುವಂತೆ ಪೀಡಿಸುತ್ತಿದ್ದಳು.
ಡಿಸೆಂಬರ್ 19ರಂದು ಮುಂಬೈಗೆ ಮರಳಿದ ಪ್ರಿಯಕರ, ಪ್ರೇಯಸಿಯಿಂದ ದೂರ ಉಳಿದಿದ್ದು, ಆಕೆಯ ಸಂಪರ್ಕ ಮಾಡಿರಲಿಲ್ಲ. ಆದರೆ ಡಿಸೆಂಬರ್ 31 ರಂದು ರಾತ್ರಿ 1.30ರ ಸುಮಾರಿಗೆ ಕರೆ ಮಾಡಿದ ಪ್ರೇಯಸಿ, ಹೊಸ ವರ್ಷದ ಸ್ವೀಟ್ ಕೊಡ್ತಿನಿ ಬಾ ಎಂದು ಮೆಸೇಜ್ ಮಾಡಿದ್ದಳು. ಮನೆಯಲ್ಲಿ ಮಕ್ಕಳು ಮಲಗಿದ ಸಂದರ್ಭದಲ್ಲಿ ಬಂದಿದ್ದ ಪ್ರಿಯಕರನಿಗೆ ಹರಿತವಾದ ಕತ್ತಿಯಿಂದ ಮರ್ಮಾಂಗ ಕತ್ತರಿಸಿದ್ದಾಳೆ.
ಮನೆಗೆ ಬಂದ ಪ್ರಿಯಕರನಿಗೆ ಪ್ಯಾಂಟ್ ಬಿಚ್ಚಲು ಹೇಳಿದ್ದಾಳೆ. ಪ್ಯಾಂಟ್ ಬಿಚ್ಚುವ ವೇಳೆ ಆಕೆ ಅಡುಗೆ ಮನೆಗೆ ಹೋಗಿ ತರಕಾರಿ ಕತ್ತರಿಸುವ ಚಾಕು ತಂದಿದ್ದು, ಕೂಡಲೇ ಆತನ ಮೇಲೆ ದಾಳಿ ಮಾಡಿದ್ದಾಳೆ. ರಕ್ತದ ಹರಿದಿದ್ದು, ಗಾಯದ ನಡುವೆಯೇ ಪ್ರಿಯರಕ ಮನೆಗೆ ವಾಪಸ್ ಬಂದಿದ್ದು, ರಕ್ತಸ್ರಾವ ನಿಲ್ಲದ ಕಾರಣ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯ ತುಂಬಾ ಆಳವಾಗಿದ್ದು, ಹಲವು ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.



