Friday, May 15, 2026
Google search engine
Homeದೇಶರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ನೇಣುಬಿಗಿದು ಯುವತಿ ಆತ್ಮಹತ್ಯೆ

ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ನೇಣುಬಿಗಿದು ಯುವತಿ ಆತ್ಮಹತ್ಯೆ

ಸಾಮಾಜಿಕ ಜಾಲತಾಣದಲ್ಲಿ ಮರಳಾಗಿರುವ ಯುವ ಸಮುದಾಯ ಹೇಗೆಲ್ಲಾ ಜೀವಹಾನಿ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆ ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ರೀಲ್ಸ್ ಮಾಡಲು ಹೋದ 27 ವರ್ಷದ ಯುವತಿ ಮೋಹಿನಿ ನೇಣಿನ ಕುಣಿಕೆ ಬಿದ್ದು ಮೃತಪಟ್ಟಿದ್ದಾಳೆ.

ಮನೆಯಲ್ಲಿ ನೇಣು ಹಾಕಿಕೊಳ್ಳುವ ದೃಶ್ಯವನ್ನು ಸೆರೆ ಹಿಡಿದು ರೀಲ್ಸ್ ಮಾಡಲು ಹೋದ ಯುವತಿ ಆಕಸ್ಮಿಕವಾಗಿ ನೇಣಿನ ಕುಣಿಕೆ ಕುತ್ತಿಗೆಗೆ ಬಿಗಿದುಕೊಂಡಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮೂಗಿಗೆ ನೇಣಿಗೆ ಹಗ್ಗ ಬರುವಂತೆ ಇಟ್ಟುಕೊಂಡು ಸ್ಟೂಲ್ ಮೇಲೆ ನಿಂತು ಮೋಹಿನಿ ರೀಲ್ಸ್ ಮಾಡಲು ಹೋಗಿದ್ದಾಳೆ. ಆದರೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರಿಂದ ಸ್ಟೂಲ್ ಕೆಳಗೆ ಬಿದ್ದಿದ್ದು, ಹಗ್ಗ ಕುತ್ತಿಗೆ ಬಿಗಿದಿದೆ.

ನಾಲ್ಕು ವರ್ಷದ ಮಗಳು ಕೋಣೆಗೆ ಹೋದಾಗ ತಾಯಿ ನೇಣುಬಿಗಿದುಕೊಂಡು ಒದ್ದಾಡುವುದನ್ನು ನೋಡಿ ಕಿರುಚಿಕೊಂಡಿದ್ದಾಳೆ. ಕೂಡಲೇ ಮನೆಯಲ್ಲಿದ್ದ ಇತರರು ಓಡಿ ಬಂದು ರಕ್ಷಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆಯ ಮಾಹಿತಿ ಪಡೆದ ಪೊಲೀಸರು ಹಗ್ಗದಿಂದ ಮಹಿಳೆಯ ಶವವನ್ನು ಕೆಳಗೆ ಇಳಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments