Sunday, June 28, 2026
Google search engine
Homeದೇಶಏರ್ ಇಂಡಿಯಾದಲ್ಲಿ 100 ದೋಷ ಪತ್ತೆ , ಈ ಪೈಕಿ 7 ಅಪಾಯಕಾರಿ: ಅಧ್ಯಯನ ವರದಿ

ಏರ್ ಇಂಡಿಯಾದಲ್ಲಿ 100 ದೋಷ ಪತ್ತೆ , ಈ ಪೈಕಿ 7 ಅಪಾಯಕಾರಿ: ಅಧ್ಯಯನ ವರದಿ

ಮುಂಬೈ: ವಿಮಾನಗಳ ಸುರಕ್ಷತೆಯ ವಿಚಾರದಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಡೆಸಿದ ಪರಿಶೋಧನೆಯಲ್ಲಿ ಏರ್ ಇಂಡಿಯಾದ ವಿಮಾನಗಳಲ್ಲಿ 100 ದೋಷಗಳು ಕಂಡು ಬಂದಿದೆ.

ಪೈಲಟ್ ಸಿಬ್ಬಂದಿ ತರಬೇತಿ, ಸಿಮುಲೇಟರ್ ಅನುಮೋದನೆ ಇಲ್ಲದ ಸಿಮುಲೇಟರ್‌ಗಳ ಬಳಕೆ, ರೋಸ್ಟರ್ ಸಿಸ್ಟಮ್, ಏರ್‌ಫೀಲ್ಡ್ ಸೇರಿದಂತೆ ಸುಮಾರು 100 ವಿವಿಧ ನಿಯಮಗಳ ಉಲ್ಲಂಘನೆಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯವು ಗಮನಿಸಿದೆ.

ಜೂನ್ 12 ರಂದು ಅಹಮದಾಬಾದ್‌ನಲ್ಲಿ ವಿಮಾನ ದುರಂತ ಸಂಭವಿಸಿದ ಬಳಿಕ, ವಿಮಾನಯಾನ ಸಂಸ್ಥೆಗಳ ಗುಣಮಟ್ಟವನ್ನು ತೀವ್ರ ಪರಿಶೀಲನೆಗೆ ಒಳಪಡಿಸಿತು. ಈ ವೇಳೆ ಏರ್ ಇಂಡಿಯಾ ಸಂಸ್ಥೆಯಲ್ಲಿ ಅಧಿಕ ಲೋಪಗಳು ಕಂಡುಬAದಿವೆ ಎಂದು ಡಿಜಿಸಿಎ ತಿಳಿಸಿದೆ.

7 ಅಪಾಯಕಾರಿ ಲೋಪಗಳು

ಏರ್ ಇಂಡಿಯಾವು ತಕ್ಷಣಕ್ಕೆ ಸರಿಪಡಿಸಿಕೊಳ್ಳಬೇಕಾದ 7 ಲೆವೆಲ್-1 ಲೋಪಗಳಿವೆ. ಇವುಗಳು ನಿರ್ಣಾಯಕ ಸುರಕ್ಷತಾ ಅಪಾಯಗಳೆಂದು ಪರಿಗಣಿಸಲಾಗಿದೆ.

ಪೈಲಟ್, ಸಿಬ್ಬಂದಿಗಳ ತರಬೇತಿ, ವಿಶ್ರಾಂತಿ, ಕರ್ತವ್ಯ ಅವಧಿಯ ನಿಯಮಗಳು, ಹೆಚ್ಚಿನ ಸಿಬ್ಬಂದಿ ಪೂರಕತೆ ಮತ್ತು ವಾಯುನೆಲೆಯ ಅರ್ಹತೆಗೆ ಸಂಬAಧಿಸಿದ ಒಟ್ಟು 100 ಲೋಪಗಳಿವೆ ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.

ಗುರುಗ್ರಾಮ್‌ನಲ್ಲಿರುವ ಏರ್ ಇಂಡಿಯಾದ ಮುಖ್ಯ ನೆಲೆಯಲ್ಲಿ ಜುಲೈ 1 ರಿಂದ ಜುಲೈ 4ರ ವರೆಗೆ ಈ ಪರಿಶೋಧನೆ ನಡೆಸಲಾಗಿದೆ. ವಿಮಾನ ಹಾರಾಟದ ವೇಳಾಪಟ್ಟಿ, ರೋಸ್ಟರಿಂಗ್ ಮತ್ತು ಇತರೆ ವಿವಿಧ ಕ್ಷೇತ್ರಗಳ ವಿವರವಾದ ಲೆಕ್ಕಪರಿಶೋಧನೆಯನ್ನು ನಡೆಸಲಾಯಿತು ಎಂದು ಡಿಜಿಸಿಎ ತಿಳಿಸಿದೆ.

ಜುಲೈ 23 ರಂದು ವಿವಿಧ ನಿಯಮಗಳ ಉಲ್ಲಂಘನೆ ಆರೋಪದಡಿ ಏರ್ ಇಂಡಿಯಾ ಸಂಸ್ಥೆಗೆ ಡಿಜಿಸಿಎ ನಾಲ್ಕು ಶೋಕಾಸ್ ನೋಟಿಸ್‌ಗಳನ್ನು ನೀಡಿದೆ.

ಏರ್ ಇಂಡಿಯಾ ಪ್ರತಿಕ್ರಿಯೆ

100 ಲೋಪಗಳನ್ನು ಎತ್ತಿ ತೋರಿಸಿರುವ ಡಿಜಿಸಿಎ ವರದಿಯನ್ನು ಏರ್ ಇಂಡಿಯಾ ಸಂಸ್ಥೆಯೂ ಒಪ್ಪಿಕೊಂಡಿದೆ. ನಿಗದಿತ ಸಮಯದೊಳಗೆ ಈ ಕುರಿತು ಡಿಜಿಸಿಎಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವುದಾಗಿ ಹೇಳಿದೆ.

“ಎಲ್ಲಾ ವಿಮಾನಯಾನ ಸಂಸ್ಥೆಗಳು ನಿಯಮಿತ ಲೆಕ್ಕಪರಿಶೋಧನೆಗಳಿಗೆ ಒಳಗಾಗುತ್ತವೆ. ಏರ್ ಇಂಡಿಯಾದ ವಾರ್ಷಿಕ ಡಿಜಿಸಿಎ ಲೆಕ್ಕಪರಿಶೋಧನೆಯು ಜುಲೈನಲ್ಲಿ ನಡೆಯಿತು.

ಈ ಸಮಯದಲ್ಲಿ ನಾವು ಲೆಕ್ಕಪರಿಶೋಧಕರೊಂದಿಗೆ ಪಾರದರ್ಶಕವಾಗಿ ಬೆಂಬಲಿಸಿದ್ದೇವೆ. ಅದು ನೀಡಿದ ವರದಿಯನ್ನು ಅಂಗೀಕರಿಸುತ್ತೇವೆ. ಸರಿಪಡಿಸಬೇಕಾದ ಲೋಪಗಳ ಬಗ್ಗೆ ಕ್ರಮ ಜರುಗಿಸಿ ನಿಗದಿತ ಅವಧಿಯೊಳಗೆ ನಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುತ್ತೇವೆ. ಏರ್ ಇಂಡಿಯಾ ತನ್ನ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments