Monday, June 1, 2026
Google search engine
Homeಮನರಂಜನೆವಿವಾದದ ಬೆನ್ನಲ್ಲೇ ಎಂಪುರನ್ ಚಿತ್ರಕ್ಕೆ 17 ದೃಶ್ಯಗಳಿಗೆ ಕತ್ತರಿ!

ವಿವಾದದ ಬೆನ್ನಲ್ಲೇ ಎಂಪುರನ್ ಚಿತ್ರಕ್ಕೆ 17 ದೃಶ್ಯಗಳಿಗೆ ಕತ್ತರಿ!

ತಿರುವನಂತಪುರ: ಬಿಡುಗಡೆ ಆದ ಬೆನ್ನಲ್ಲೇ ಭಾರೀ ವಿವಾದಕ್ಕೆ ಕಾರಣವಾಗಿರುವ ದಿಗ್ಗಜ ನಟ ಮೋಹನ್ ಲಾಲ್ (mohanlal) ನಟಿಸಿರುವ ಮಲಯಾಳಂನ ಎಲ್-2: ಎಂಪುರಾನ್” (L2 Empuraan) ಚಿತ್ರದ 17 ದೃಶ್ಯಗಳಿಗೆ ಕತ್ತರಿ ಹಾಕಲು ತೀರ್ಮಾನಿಸಲಾಗಿದೆ.

ಲೂಸಿಫರ್ ಚಿತ್ರದ ಎರಡನೇ ಭಾಗವಾಗಿರುವ ಎಂಪುರನ್ ಚಿತ್ರ ಬಿಡುಗಡೆ ಆದ ಚಿತ್ರ ಮೊದಲ ವಾರದಲ್ಲೇ 100 ಕೋಟಿ ಗಳಿಸಿ ಹೊಸ ದಾಖಲೆ ಬರೆದಿದೆ. ಆದರೆ ಗುಜರಾತ್ ಗಲಭೆ ಕುರಿತು ಪ್ರಸ್ತಾಪಿಸಿರುವ ಈ ಚಿತ್ರದಲ್ಲಿ ಆರ್ ಎಸ್ ಎಸ್ ಅವಹೇಳನ ಮಾಡಲಾಗಿದೆ ಎನ್ನಲಾಗಿದೆ.

ಎಂಪುರಾನ್ಚಿತ್ರವು 2002ರ ಗುಜರಾತ್ ಗಲಭೆ ವಿಷಯಗಳನ್ನು ಪ್ರಸ್ತಾಪಿಸಿದ್ದು, ಸಂಘ ಪರಿವಾರದ ಬಣ್ಣ ಬಯಲಿಗಿಳಿದಿದೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೇಳಿಕೆ ನೀಡಿದರೆ, ಬಲಪಂಥೀಯ ಸಂಘಟನೆಗಳು ಇದನ್ನುಹಿಂದು ವಿರೋಧಿ ಪ್ರಚಾರಎಂದು ಟೀಕಿಸಿವೆ. ಇದರಿಂದ ಸಿನಿಮಾಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಭಾರೀ ವಿವಾದದ ಹಿನ್ನೆಲೆಯಲ್ಲಿ ಚಿತ್ರ ತಂಡ 17 ದೃಶ್ಯಗಳಿಗೆ ಕಡಿತ ಹಾಕಲು ನಿರ್ಧರಿಸಿದ್ದು, ಏಪ್ರಿಲ್ 2ರಂದು ಕತ್ತರಿ ಹಾಕಲಾದ ದೃಶ್ಯಗಳ ಸಿನಿಮಾ ಪ್ರದರ್ಶನ ಆಗಲಿದೆ. ಅಲ್ಲಿಯವರೆಗೂ ಕೆಲವು ಚಿತ್ರ ಮಂದಿರಗಳಲ್ಲಿ ವಿವಾದಾತ್ಮಕ ಸಂಭಾಷಣೆಯ ಭಾಗಗಳಲ್ಲಿ ಮ್ಯೂಟ್ ಮಾಡಲಾಗುತ್ತದೆ ಎಂದು ತಿಳಿಸಿದೆ.

ಎಂಪುರನ್ ಚಿತ್ರ ಮಲಯಾಳಂ ಅಲ್ಲದೇ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ತೆರೆ ಕಂಡಿದ್ದು, 4000 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆದ ನಾಲ್ಕೇ ದಿನದಲ್ಲಿ ಚಿತ್ರ 100 ಕೋಟಿ ರೂ. ಬಾಚಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments