Friday, May 15, 2026
Google search engine
Homeದೇಶ12 ವರ್ಷದಲ್ಲಿ ಕಡು ಬಡತನದಿಂದ ಹೊರಬಂದ 26.9 ಕೋಟಿ ಭಾರತೀಯರು: ವಿಶ್ವ ಬ್ಯಾಂಕ್ ವರದಿ

12 ವರ್ಷದಲ್ಲಿ ಕಡು ಬಡತನದಿಂದ ಹೊರಬಂದ 26.9 ಕೋಟಿ ಭಾರತೀಯರು: ವಿಶ್ವ ಬ್ಯಾಂಕ್ ವರದಿ

ಕಳೆದ 12 ವರ್ಷದಲ್ಲಿ ಭಾರತದಲ್ಲಿ ಬಡತನ ಪ್ರಮಾಣದಲ್ಲಿ ಶೇ.5.3ರಷ್ಟು ಇಳಿಕೆಯಾಗಿದೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.

ಭಾರತದಲ್ಲಿ 2011-12ನೇ ಸಾಲಿನಲ್ಲಿ ಶೇ.27.1 ರಷ್ಟು ಕಡುಬಡತನ ಪ್ರಮಾಣವಿತ್ತು. ಆದರೆ 2022-23ನೇ ಸಾಲಿನಲ್ಲಿ 5.3ರಷ್ಟು ಕಡಿಮೆ ಆಗಿದೆ. ಅಂದರೆ 2011-12ನೇ ಸಾಲಿನಲ್ಲಿ 75.24 ದಶಲಕ್ಷ ಜನರು ಕಡುಬಡತನದಲ್ಲಿದ್ದರು. ಆದರೆ 2022-23ನೇ ಸಾಲಿನಲ್ಲಿ 344.47 ದಶಲಕ್ಷ ಜನರು ಕಡುಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವರದಿ ಹೇಳಿದೆ.

ಕಳೆದ ಒಂದು ದಶಕದಲ್ಲಿ 26.9 ಕೋಟಿ ಭಾರತೀಯರು ಕಡು ಬಡತನದಿಂದ ಹೊರಗೆ ಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ಹೇಳಿದೆ.

2011-12ರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳಲ್ಲಿ ಶೇ. 65ರಷ್ಟಿದ್ದ ಒಟ್ಟು ಕಡು ಬಡವರ ಸಂಖ್ಯೆ 2022-23ರ ವೇಳೆಗೆ ಮೂರನೇ ಎರಡು ಭಾಗದಷ್ಟು ಕಡಿಮೆ ಆಗಿದೆ.

ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ 2021ರ ದರ ಏರಿಕೆ ಆಧರಿಸಿ ದಿನನಿತ್ಯ 3 ಡಾಲರ್ ಅಂದರೆ ಅಂದಾಜು 250 ರೂ.ಗಿಂತ ಕಡಿಮೆ ವೇತನ ಹೊಂದಿದವರನ್ನು ಕಡುಬಡತನ ರೇಖೆಗಿಂತ ಕೆಳಗೆ ಇದ್ದಾರೆ ಎಂದು ಹೇಳಲಾಗುತ್ತದೆ.

2017ರ ದರ ಏರಿಕೆ ಆಧರಿಸಿ ದಿನದ ಆದಾಯ 2.15 ಡಾಲರ್ ಅಂದರೆ 200 ರೂ.ಗೆ ಇಳಿಕೆ ಆಗಿದೆ. ಇದನ್ನು ಗಮನಿಸಿದರೆ ಕಡು ಬಡತನದಲ್ಲಿ ವಾಸಿಸುವ ಭಾರತೀಯರ ಪಾಲು ಶೇ.2.3 ಆಗಿದ್ದು, 20112-12 ಕ್ಕೆ ಹೋಲಿಸಿದರೆ ಶೇ. 16.2ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಕಳೆದ 11 ವರ್ಷಗಳಲ್ಲಿ ಗ್ರಾಮೀಣ ತೀವ್ರ ಬಡತನವು ಶೇಕಡಾ 18.4 ರಿಂದ ಶೇಕಡಾ 2.8 ಕ್ಕೆ ಮತ್ತು ನಗರ ತೀವ್ರ ಬಡತನವು ಶೇಕಡಾ 10.7 ರಿಂದ ಶೇಕಡಾ 1.1 ಕ್ಕೆ ಇಳಿದಿದ್ದು, ಈ ತೀವ್ರ ಕುಸಿತವನ್ನು ಏಕರೂಪವಾಗಿ ಗಮನಿಸಲಾಗಿದೆ ಎಂದು ದತ್ತಾಂಶವು ತೋರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments