Friday, May 15, 2026
Google search engine
Homeದೇಶಮ್ಯಾನ್ಮರ್ ನಲ್ಲಿ ಮತ್ತೆ ಭೂಕಂಪನ: 5.1 ತೀವ್ರತೆ ದಾಖಲು!

ಮ್ಯಾನ್ಮರ್ ನಲ್ಲಿ ಮತ್ತೆ ಭೂಕಂಪನ: 5.1 ತೀವ್ರತೆ ದಾಖಲು!

ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದ ಪ್ರಬಲ ಭೂಕಂಪನ ಸಂಭವಿಸಿದ ಮ್ಯಾನ್ಮರ್ ಮತ್ತು ಬ್ಯಾಂಕಾಂಕ್ ನಲ್ಲಿ ಭಾನುವಾರ ಮತ್ತೆ ಭೂಮಿ ಕಂಪಿಸಿ ಆತಂಕ ಮೂಡಿಸಿದೆ.

ಶನಿವಾರ ಮಧ್ಯಾಹ್ನ 2.50ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 5.1ರ ತೀವ್ರತೆ ದಾಖಲಿಸಿದೆ.

ಮ್ಯಾನ್ಮರ್ ರಾಜಧಾನಿ ನಯಿಪೇಯಿಡುನಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿ ಕಂಪಿಸಿದ ತೀವ್ರತೆಗೆ ರಸ್ತೆಗಳು ಬಿರುಕು ಬಿಟ್ಟಿದ್ದು, ವಿದ್ಯುತ್ ಸಂಪರ್ಕಗಳು ಕಡಿತಗೊಂಡಿದೆ.

ಶುಕ್ರವಾರ 7.7ಮತ್ತು 6.8ರ ತೀವ್ರತೆಯಲ್ಲಿ ಎರಡು ಬಾರಿ ಸಂಭವಿಸಿದ ಭೀಕರ ಭೂಕಂಪನದಲ್ಲಿ 1000ಕ್ಕೂ ಅಧಿಕ ಜನರು ಅಸುನೀಗಿದ್ದಾರೆ. ಹಲವು ಬಹುಮಹಡಿ ಕಟ್ಟಡಗಳು ಧರೆಗುರುಳಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments