Friday, June 26, 2026
Google search engine
Homeದೇಶಅಯೋಧ್ಯೆಯಲ್ಲಿ ಭೀಕರ ಸ್ಫೋಟದ ಬೆನ್ನಲ್ಲೇ ಕುಸಿದ ಮನೆ: 5 ಮಂದಿ ದುರ್ಮರಣ

ಅಯೋಧ್ಯೆಯಲ್ಲಿ ಭೀಕರ ಸ್ಫೋಟದ ಬೆನ್ನಲ್ಲೇ ಕುಸಿದ ಮನೆ: 5 ಮಂದಿ ದುರ್ಮರಣ

ಭೀಕರ ಸ್ಫೋಟ ಕೇಳಿ ಬಂದ ಬೆನ್ನಲ್ಲೇ ಮನೆಯೊಂದು ಕುಸಿದ ಪರಿಣಾಮ ಕನಿಷ್ಠ 5 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಂಭವಿಸಿದೆ.

ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಕುಸಿದು ಬಿದ್ದ ಆವಶೇಷಗಳಡಿ ಹಲವಾರು ಮಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಗಾಯಗೊಂಡವರನ್ನು ಸ್ಥಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘಟನೆಯ ಮಾಹಿತಿ ಪಡೆದಿದ್ದು, ರಕ್ಷಣಾ ಕಾರ್ಯ ಬಿರುಸಿನಿಂದ ನಡೆಸಿ ಆವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವಂತೆ ಸೂಚಿಸಿದ್ದಾರೆ.

ಮನೆಯಲ್ಲಿ ಇರಿಸಿದ್ದ ಪಟಾಕಿ ಸಿಡಿತದಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮತ್ತೊಂದೆಡೆ ಅಧಿಕಾರಿಗಳು ಗ್ಯಾಸ್‌ ಸಿಲಿಂಡರ್‌ ಸ್ಫೋಟದಿಂದ ಈ ಅನಾಹುತ ಆಗಿರಬಹುದು ಎಂದು ಅಂದಾಜಿಸಿದ್ದು, ಎಫ್‌ ಎಸ್‌ ಎಲ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments