ಬ್ಯಾಟ್ಸ್ ಮನ್ ಗಳ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ಅನ್ನು 8 ವಿಕೆಟ್ ಗೆ 564 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ.
ಚಂಡೀಗಢದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಭೋಜನ ವಿರಾಮದ ನಂತರ ಭಾರತ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆಫ್ಘಾನಿಸ್ತಾನ ಪರ ಮೊಹಮದ್ ಸಲೀಂ 6 ವಿಕೆಟ್ ಪಡೆದು ಮಿಂಚಿದರು.
ಭಾರತದ ಪರ ಶುಭಮನ್ ಗಿಲ್ 126, ರಿಷಭ್ ಪಂತ್ 81 ರನ್ ಗಳಿಸಿ ತಂಡದ ಮೊತ್ತ ಉಬ್ಬಿಸಿದರು. ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅಜೇಯ 52 ರನ್ ಗಳಿಸಿದರು. ಮಾನವ್ ಸತ್ತರ್ 28 ಹಾಗೂ ಮೊಹಮದ್ ಸಿರಾಜ್ 22 ರನ್ ಬಾರಿಸಿ ಉಪಯುಕ್ತ ಕಾಣಿಕೆ ನೀಡಿದರು.



