ಬೆಂಗಳೂರಿಗೆ 2 ಸೇರಿದಂತೆ ದೇಶಾದ್ಯಂತ ಸಂರ್ಪಕಿಸುವ 7 ಹೈಸ್ಪೀಡ್ ರೈಲು ಮಾರ್ಗಗಳ ಕಾರಿಡಾರ್ ಯೋಜನೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಲೋಕಸಭೆಯಲ್ಲಿ ಭಾನುವಾರ 16ನೇ ಆಯವ್ಯಯ ಮಂಡಿಸಿದ ನಿರ್ಮಲಾ ಸೀತರಾಮನ್, 7 ಹೈಸ್ಪೀಡ್ ರೈಲು ಮಾರ್ಗಗಳ ಕಾರಿಡಾರ್ ಯೋಜನೆಯನ್ನು ಘೋಷಿಸಿದರು.
ಬೆಂಗಳೂರು- ಹೈದರಾಬಾದ್, ಬೆಂಗಳೂರು- ಚೆನ್ನೈ, ಪುಣೆ- ಮುಂಬೈ, ಪುಣೆಯಿಂದ ಹೈದರಾಬಾದ್ ಸೇರಿದಂತೆ 7 ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಮಾರ್ಗಗಳ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಪ್ರಕಟಿಸಿದ್ದಾರೆ.
ಅತ್ಯಂತ ಹೆಚ್ಚು ದೂರದ ಪ್ರಮುಖ ನಗರಗಳ ನಡುವೆ ಸಾಂಸ್ಕೃತಿಕ, ವಾಣಿಜ್ಯ ಸಂಪರ್ಕಗಳನ್ನು ವೇಗವಾಗಿ ಸಾಧಿಸುವ ಉದ್ದೇಶದಿಂದ ಆರ್ಥಿಕ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಹೈಸ್ಪೀಡ್ ರೈಲು ಮಾರ್ಗಗಳನ್ನು ಘೋಷಿಸುವುದಾಗಿ ಅವರು ಹೇಳಿದರು.



