Wednesday, May 13, 2026
Google search engine
Homeವಿದೇಶಪಾಕಿಸ್ತಾನದ ಮದುವೆ ಸಮಾರಂಭ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಮಂದಿ ದುರ್ಮರಣ

ಪಾಕಿಸ್ತಾನದ ಮದುವೆ ಸಮಾರಂಭ ಮೇಲೆ ಆತ್ಮಾಹುತಿ ಬಾಂಬ್ ದಾಳಿ: 7 ಮಂದಿ ದುರ್ಮರಣ

ಮದುವೆ ಸಮಾರಂಭದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಿಂದ ಸ್ಫೋಟ ಸಂಭವಿಸಿದ 7 ಮಂದಿ ಮೃತಪಟ್ಟು, 25 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಈಶಾನ್ಯ ಪಾಕಿಸ್ತಾನದ ಖೈಬರ್ ಪಕ್ತುಕುವಾರ ಪ್ರಾಂತ್ಯದಲ್ಲಿ ಸರ್ಕಾರ ಪರ ಕೆಲಸ ಮಾಡುತ್ತಿದ್ದ ನೂರ್ ಅಹ್ಮದ್ ಮೆಹಸೂದ್ ನಿವಾಸದ ಮೇಲೆ ಈ ದಾಳಿ ನಡೆದಿದೆ.

ಸ್ಫೋಟದ ತೀವ್ರತೆಗೆ ಮನೆ ಕುಸಿದುಬಿದ್ದಿದ್ದು, ಜನರು ಆತಂಕಗೊಂಡು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.

ದಾಳಿಯ ವೇಳೆ ಮದುವೆ ಮನೆಯಲ್ಲಿ ಸಂಬಂಧಿಕರು ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿದ್ದರು. ಈ ವೇಳೆ ದೊಡ್ಡ ಸ್ಫೋಟ ಉಂಟಾಗಿ ಮನೆಯ ಮೇಲ್ಫಾವಣಿ ಕುಸಿದು ಬಿದ್ದಿದೆ. ಆವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲು ಸ್ಥಳೀಯರು ಪರದಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments