Saturday, June 20, 2026
Google search engine
Homeದೇಶದೇವಸ್ಥಾನದ ಮೇಲ್ಫಾವಣಿ ಕುಸಿದು 7 ಮಂದಿ ದುರ್ಮರಣ

ದೇವಸ್ಥಾನದ ಮೇಲ್ಫಾವಣಿ ಕುಸಿದು 7 ಮಂದಿ ದುರ್ಮರಣ

ನಿರ್ಮಾಣ ಹಂತದ ಆಂಜನೇಯ ದೇವಸ್ಥಾನದ ಮೇಲ್ಫಾವಣಿ ಕುಸಿದು ಕನಿಷ್ಠ 7 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಆವಶೇಷಗಳಡಿ ಸಿಲುಕಿರುವ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.

ಪ್ರಭಾನಿ ಜಿಲ್ಲೆಯ ಯಶ್ವಾಡಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಕಾಮಗಾರಿ ವೇಳೆ ಶನಿವಾರ ಮೇಲ್ಫಾವಣಿ ಕುಸಿತ ಕಂಡಿದೆ. ಅವಘಡದ ವೇಳೆ 20ಕ್ಕೂ ಹೆಚ್ಚು ಜನರು ಇದ್ದರು ಎಂದು ಶಂಕಿಸಲಾಗಿದೆ.

ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಮೇಲ್ಫಾವಣಿಗೆ ಹೊಸದಾಗಿ ಹಾಕಲಾಗಿದ್ದ ಕಲ್ಲುಗಳು ಕಳಚಿ ಬಿದ್ದಿದೆ. ಇದರಿಂದ ದರ್ಶನಕ್ಕೆ ಬಂದಿದ್ದ ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿ ಹಾಗೂ ಕಾರ್ಮಿಕರ ಮೇಲೆ ಮೇಲ್ಫಾವಣಿ ಕುಸಿದಿದೆ. ಮೇಲ್ಫಾವಣಿ ಕುಸಿತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments