Tuesday, May 26, 2026
Google search engine
Homeರಾಜ್ಯವಸತಿ ಶಾಲೆ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ: ವಾರ್ಡನ್‌ ಸೇರಿ ನಾಲ್ವರು...

ವಸತಿ ಶಾಲೆ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ: ವಾರ್ಡನ್‌ ಸೇರಿ ನಾಲ್ವರು ಅಮಾನತು

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿರುವ ಹಳೆಪೇಟದಲ್ಲಿ 9ನೇ ತರಗತಿ ವಿಧ್ಯಾರ್ಥಿನಿಯೋರ್ವಳು ವಸತಿ ಶೌಚಾಲಯದಲ್ಲೆ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲೆಲಯ ಶಹಾಪೂರದಲ್ಲಿ ಬುಧವಾರ ನಡೆದಿದೆ.

ಒಟ್ಟು ವಸತಿ ಶಾಲೆಯಲ್ಲಿ 50 ಹೆಣ್ಣು ಮಕ್ಕಳಿದ್ದು, ಪ್ರತಿಷ್ಟಿತ ಶಾಲೆಯಲ್ಲಿ ಒಂದಾಗಿದೆ, ಇಲ್ಲಿ ಸಿಸಿ ಕ್ಯಾಮರಗಳ ಕಣ್ಗವಾಲು ಇದೆ, ಆದರೂ ಈ ಘಟನೆ ನಡೆದಿದ್ದು ತರ್ಕಕ್ಕೆ ನಿಲುಕದಂತಾಗಿದೆ ಎಂದು ಇಲ್ಲಿನ ಜನ ಸಾಮಾನ್ಯರು ಮಾತಾಡಿಕೊಳ್ಳುತ್ತಿದ್ದಾರೆ. ಬುಧವಾರದಂದು, 3 ಗಂಟೆ 30 ನಿಮೀಷಕ್ಕೆ ಶೌಚಾಲಯದಲ್ಲಿ ಹೆರಿಗೆ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿ ತಾಯಿ ಮಗುವನ್ನು ರಾತ್ರಿ 4.45ಗೆ ದಾಖಲು ಮಾಡಿದ್ದಾರೆ,

ಸುದ್ದಿ ತಿಳಿಯುತ್ತಲೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿಗಳಾದ ಹರ್ಷದ ಬೋಯರ್ , ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿಗಳಾದ ಪ್ರೃತ್ವೀಕ ಶಂಕರ್ ,ಡಿವೈಎಸ್ಪಿ, ಜಾವೇದ ಇನಾಮದಾರ, ಯಾದಗಿರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚೆನ್ನಬಸ್ಸಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಡಾ, ಮಹೇಶ ಬಿರಾದಾರ ತಾಲುಕಾ ಆರೋಗ್ಯ ಅಧಿಕಾರಿ ಡಾ, ರಮೇಶ ಗುತ್ತೆದಾರವರು ಭೇಟಿ ನೀಡಿದ್ದಾರೆ.

ಹೆರಿಗೆಯಾದ ವಿದ್ಯಾರ್ಥಿನಿ, ತಾಯಿ, ಮತ್ತು ವಾರ್ಡನ, ಪ್ರಾಂಶುಪಾಲರು, ಸ್ಟಾಪ ನರ್ಸರವರನ್ನು ವಿಚಾರಣೆ ಮಾಡಿದರು, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಡಿ,ಸಿ, ಹರ್ಷದ್ ಬೋಯರ್ ರವರು ಸಮರ್ಪಕ ವಿಚಾರಣೆ ನಡೆಸುತ್ತಿದ್ದು, ಶಾಲಾ ಪ್ರಾಚಾರ್ಯರು, ವಾರ್ಡನ್ ಸೇರಿದಂತೆ ನಾಲ್ವರು ಇತರೆ ಸಂಬಂಧಿಸಿದ ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತಿದೆ. ಘಟನೆ ವಿಚಾರಣೆ ಹಂತದಲ್ಲಿರುವದರಿಂದ ಮಾಧ್ಯಮಕ್ಕೆ ಈಗಲೇ ಬಹಿರಂಗ ಪಡಿಸಲಾಗುವದಿಲ್ಲ. ಒಟ್ಟಾರೆ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಪಾಲಕರಾರು ಆತಂಕ, ಭಯ ಪಡುವ ಅಗತ್ಯವಿಲ್ಲ. ವಿದ್ಯಾರ್ಥಿನಿ ಮತ್ತು ಮಗುವನ್ನು ಯಾದಗಿರಿಯ ತಾಯಿ ಮತ್ತು ಮಗು ಸುರಕ್ಷಿತ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಮುಂದೆ ಯಾವುದೇ ಶಾಲೆ, ವಸತಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಲೂ ಸೂಚಿಸಿದ್ದೇನೆ. ಅಲ್ಲದೆ ವಸತಿ ಶಾಲೆಯ ಪ್ರಾಂಸುಪಾಲರು, ವಾರ್ಡನ್ , ದೈಹಿಕ ಶಿಕ್ಷಕ, ವಿಜ್ಞಾನ ಶಿಕ್ಷಕ, ಸೇರಿದಂತೆ ನಾಲ್ವರ ಅಮಾನತ್ತುಗೊಳಿಸಿ ಆದೇಶ ಹೊರಿಡಿಸಿದ್ದಾರೆ,

ಮಗು ಆರೋಗ್ಯವಾಗಿದ್ದು ಮುಂದೆ ಬಾಲಮಂದಿರದಲ್ಲಿ ತಾಯಿ ಮಗುವನ್ನು ರಕ್ಷಣೆ ಮಾಡಲಾಗುತ್ತದೆ, ಈ ಕುರಿತು ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ, ಪ್ರಾಂಶುಪಾಲರು, ವಾರ್ಡನ್, ಸ್ಠಾಪ್ ನರ್ಸ, ಹಾಗೂ ವಿಧ್ಯಾರ್ಥಿನಿಗೆ ಅತ್ಯಾಚಾರ ಮಾಡಿದ ಆರೋಪಿ, ಹಾಗೂ ವಿಧ್ಯಾರ್ಥಿನಿ ಸಹೋದರ, ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ,ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments