Thursday, October 3, 2024
Google search engine
Homeಕ್ರೀಡೆ11 ವರ್ಷಗಳ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೈಕಲ್ ಶುಮಾಕರ್!

11 ವರ್ಷಗಳ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೈಕಲ್ ಶುಮಾಕರ್!

ಸ್ಕೈಯಿಂಗ್ ವೇಳೆ ಅಪಘಾತಕ್ಕೆ ಒಳಗಾಗಿದ್ದ 7 ಬಾರಿಯ ಫಾರ್ಮುಲಾ-1 ಚಾಂಪಿಯನ್ ಮೈಕಲ್ ಶುಮಾಕರ್ 11 ವರ್ಷಗಳ ನಂತರ ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಅಪಘಾತದ ನಂತರ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಮೈಕೆಲ್ ಶುಮಾಕರ್ ಅವರ ಈಗಿನ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಲಾಗಿಲ್ಲ. ಅಲ್ಲದೇ ಅವರ ಫೋಟೊ ಕೂಡ ಬಹಿರಂಗಪಡಿಸಿಲ್ಲ.

54 ವರ್ಷದ ಶುಮಾಕರ್ ಪುತ್ರಿ ಗೀನಾ ಗೆಳೆಯ ಲಿಯಾನ್ ಬೆಥಾಕೆ ಅವರ ಮದುವೆ ಸಮಾರಂಭ ಸ್ಪೇನ್ ನ ಮಲ್ಲೊರಾಕದಲ್ಲಿ ನಡೆದಿದ್ದು, ಈ ವೇಳೆ ಶುಮಾಕರ್ ಸಾರ್ವಜನಿಕವಾಗಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮದುವೆ ಸಮಾರಂಭದಲ್ಲಿ ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿದ್ದು, ಶುಮಾಕರ್ ಗೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

ಫ್ರಾನ್ಸ್ ಆಲ್ಫಾ ಹಿಮದ ಪರ್ವತಗಳ ನಡುವೆ ಸ್ಕೈಯಿಂಗ್ ಮಾಡುವಾಗ ಅಪಘಾತಕ್ಕೆ ಒಳಗಾಗಿದ್ದ ಶುಮಾಕರ್ ಹಲವು ವರ್ಷಗಳ ಕಾಲ ಕೋಮಾದಲ್ಲಿದ್ದರು. ತಲೆಗೆ ಭಾರೀ ಹೊಡೆತ ಬಿದ್ದಿದ್ದರಿಂದ ಹೆಲಿಕಾಫ್ಟರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಗೆದ್ದು ಬಂದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments