ಮುಂದಿನ 48 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಇಸ್ರೇಲ್ ಮೇಲೆ ಇರಾನ್ ನೇರ ದಾಳಿ ಮಾಡಬಹುದಾಗಿದೆ ಎಂದು ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆ ವರದಿ ಮಾಡಿದೆ.
ಡಮುಸ್ಕಾಸ್ ಪ್ರಾಂತ್ಯದ ಮೇಲೆ ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ಮೇಲೆ ನೇರವಾಗಿ ದಾಳಿ ಮಾಡಲು ಇರಾನ್ ಸಿದ್ಧತೆ ನಡೆಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪರಿಣಾಮಗಳಿಗಾಗಿ ಇರಾನ್ ಕಾಯುತ್ತಿತ್ತು. ಆದರೆ ಎರಡೂ ದೇಶಗಳ ನಡುವಿನ ಯುದ್ಧ ಮುಗಿಯುವ ಸೂಚನೆ ದೊರೆಯದ ಕಾರಣ ಇರಾನ್ ಇಸ್ರೇಲ್ ಮೇಲೆ ದಾಳಿಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ.