ಆಮ್ ಆದ್ಮಿ ಪಕ್ಷದಲ್ಲಿ ಸಚಿವರಾಗಿದ್ದ ಕೈಲಾಶ್ ಗೆಹ್ಲೋಟ್ ಸೋಮವಾರ ಬೆಳಿಗ್ಗೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಸಚಿವ ಸ್ಥಾನಕ್ಕೆ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾರನೇ ದಿನವೇ ಬಿಜೆಪಿಗೆ ಕೈಲಾಶ್ ಗೆಹ್ಲೋಟ್ ಸೇರ್ಪಡೆಯಾಗಿದ್ದಾರೆ.
ಜನರ ಭರವಸೆ ಈಡೇರಿಸುವಲ್ಲಿ ಆಪ್ ವಿಫಲವಾಗಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದ ಕೈಲಾಶ್, ಯಾವುದೇ ಒತ್ತಡಕ್ಕೆ ಮಣಿಯದೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಜನರ ಆಶೋತ್ತರಗಳಿಗೆ ಹೋರಾಡುವ ಭರವಸೆ ನೀಡಿದ್ದ ಆಮ್ ಆದ್ಮಿ ಇತ್ತೀಚೆಗೆ ಕೇವಲ ರಾಜಕೀಯ ಕುರ್ಚಿಗಾಗಿ ಹೋರಾಟ ನಡೆಸುತ್ತಿದೆ. ಇದರಿಂದ ಕೆಲವು ಅನಗತ್ಯ ಹಾಗೂ ಅಸಹ್ಯಕರ ವಿವಾದಗಳಿಗೆ ಪಕ್ಷ ಸಿಲುಕಿದೆ ಎಂದು ಅವರು ಆರೋಪಿಸಿದರು.
ಆಮ್ ಆದ್ಮಿ ಪಕ್ಷದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೂರನೇ ವ್ಯಕ್ತಿ ಕೈಲಾಶ್ ಆಗಿದ್ದಾರೆ. ಇದಕ್ಕೂ ಮುನ್ನ ರಾಜ್ ಕುಮಾರ್ ಆನಂದ್ ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ರಾಜ್ ಆನಂದ್ ಗೂ ಮುನ್ನ ಪಾಲ್ ಆನಂದ್ ಕೂಡ ರಾಜೀನಾಮೆ ನೀಡಿದ್ದರು.