ವಿದ್ಯಾರ್ಥಿ ಜೊತೆ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ ಶಿಕ್ಷಕಿಗೆ ಅಮೆರಿಕದ ಮೇರಿಲ್ಯಾಂಡ್ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ವಿಧಿಸಿದೆ.
32 ವರ್ಷದ ಮೆಲಿಸಾ ಕುರ್ಟಿಸ್ ಎಂಬ ಶಿಕ್ಷಕಿಗೆ 30 ವರ್ಷ ಶಿಕ್ಷೆ ವಿಧಿಸಲಾಗಿದ್ದರೂ ಒಂದು ವರ್ಷ ವಿನಾಯಿತಿ ಹಾಗೂ ಉತ್ತಮ ನಡತೆ ಆಧಾರದ ಮೇಲೆ 5 ವರ್ಷ ಶಿಕ್ಷೆ ಪ್ರಮಾಣ ಕಡಿತಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
ಶಿಕ್ಷಕಿ 25 ವರ್ಷಗಳ ಕಾಲ ಹೆತ್ತ ಮಕ್ಕಳನ್ನು ಹೊರತುಪಡಿಸಿ ಉಳಿದ ಯಾವುದೇ ಅಪ್ರಾಪ್ತರೊಂದಿಗೆ ಭೇಟಿ ಮಾಡುವಂತಿಲ್ಲ. ಅಲ್ಲಿಯವರೆಗೂ ಆಕೆಯನ್ನು ಸೆಕ್ಸ್ ಅಪರಾಧಿ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿದೆ.
2023 ನವೆಂಬರ್ 7ರಂದು ಶಿಕ್ಷಕಿ ಮೆಲಿಸಾ ಕುರ್ಟಿಸ್ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲಾಗಿತ್ತು. 8ನೇ ತರಗತಿ ವಿದ್ಯಾರ್ಥಿಗೆ ಡ್ರಗ್ಸ್ ಹಾಗೂ ಮತ್ತು ಬರುವ ಔಷಧ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಳು. ಈ ರೀತಿ 20 ಕ್ಕೂ ಅಧಿಕ ಬಾರಿ ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಳು.
ಮೆಲಿಸಾ ಮುಖ್ಯಸ್ಥೆ ಆಗಿದ್ದ ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸೇರಿದ ನಂತರ ಆತನನ್ನು ಶಿಕ್ಷಕಿ ಕಾಮತೃಷೆಗೆ ಬಳಸಿಕೊಂಡಿದ್ದಾಳೆ. ವಿದ್ಯಾರ್ಥಿ ಕೂಡ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದರಿಂದ ಜೂನ್ 20ರಂದು ಆರೋಪ ಸಾಬೀತಾಗಿತ್ತು.