ಇಸ್ಕಾನ್ ನ ಮತ್ತೊಬ್ಬ ಮುಖಂಡನನ್ನು ಬಾಂಗ್ಲಾದೇಶ ಬಂಧಿಸುವ ಮೂಲಕ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿಸಿದೆ.
ಇಸ್ಕಾನ್ ಮುಖಂಡನನ್ನು ಬಂಧಿಸಿದ ನಂತರ ಇಸ್ಕಾನ್ ದೇವಸ್ಥಾನದ ೧೭ ಬ್ಯಾಂಕ್ ಖಾತೆಗಳನ್ನು ರದ್ದುಗೊಳಿಸಿದ್ದ ಬಾಂಗ್ಲಾದೇಶ ಸರ್ಕಾರ ಇದೀಗ ಮತ್ತೊಬ್ಬರನ್ನು ಬಂಧಿಸಿದೆ.
ಬಾಂಗ್ಲಾದೇಶ ಹೈಕೋರ್ಟ್ ಇಸ್ಕಾನ್ ನಿಷೇಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ಬೆನ್ನಲ್ಲೇ ಇಸ್ಕಾನ್ ವಿರುದ್ಧ ಮತ್ತಷ್ಟು ಉಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇಸ್ಕಾನ್ ನಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಹಾಗೂ ಇಸ್ಕಾನ್ ಮುಖಂಡನ ಬಂಧನ ಕುರಿತು ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವ ಜೈ ಶಂಕರ್, ನ್ಯಾಯಸಮ್ಮತ ವಿಚಾರಣೆ ನಡೆಸಲಿ ಎಂದು ಆಗ್ರಹಿಸಿದ್ದರು.
ಚಟ್ಟಾಗ್ರೋಮ್ ನಲ್ಲಿ ಶ್ಯಾಮ್ ದಾಸ್ ಪ್ರಭು ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಲು ಹೋದಾಗ ಬಂಧಿಸಲಾಗಿದ್ದು, ಯಾವುದೇ ಅರೆಸ್ಟ್ ವಾರೆಂಟ್ ಜಾರಿಗೊಳಿಸದೇ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇಸ್ಕಾನ್ ೧೭ ಬ್ಯಾಂಕ್ ಖಾತೆ ಜಫ್ತಿ ಮಾಡಿದ ಬಾಂಗ್ಲಾ!
ಇಸ್ಕಾನ್ ಮುಖಂಡನನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಸರ್ಕಾರ ಇಸ್ಕಾನ್ ನ ೧೭ ಬ್ಯಾಂಕ್ ಖಾತೆಗಳನ್ನು ಜಫ್ತಿ ಮಾಡಿದೆ.
ಬಾಂಗ್ಲಾದೇಶ ಹೈಕೋರ್ಟ್ ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬೆನ್ನಲ್ಲೇ ಇದೀಗ ಇಸ್ಕಾನ್ ದೇವಸ್ಥಾನ ೧೭ ಬ್ಯಾಂಕ್ ಖಾತೆಗಳನ್ನು ೩೦ ದಿನಗಳ ಕಾಲ ತಟಸ್ಥಗೊಳಿಸಿದೆ.
ಇಸ್ಕಾನ್ ಮಾಜಿ ಸದಸ್ಯ ಚಿನ್ನಯಿ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಆರೋಪದ ಮೇಲೆ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದರು. ಬಂಧನ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಇಸ್ಕಾನ್ ಬೆಂಬಲಿಗರು ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ಬಾಂಗ್ಲಾದೇಶದ ಹಣಕಾಸು ಗುಪ್ತಚರ ವಿಭಾಗ ಇಸ್ಕಾನ್ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ತೆರೆಯಲಾಗಿದ್ದ ಎಲ್ಲಾ ಖಾತೆಗಳನ್ನು ೩೦ ದಿನಗಳ ಕಾಲ ತಟಸ್ಥಗೊಳಿಸಲು ಸೂಚಿಸಿದೆ.