ಮಹಿಳೆಯೊಬ್ಬರಿಗೆ ಪಾರ್ಸೆಲ್ ನಲ್ಲಿ ಶ ಕಳುಹಿಸಿದ ದುಷ್ಕರ್ಮಿಗಳು 1.30 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಉಂಡಿ ಮಂಡಲ್ ನ ಯೆಂಡಾಗಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎಲೆಕ್ಟ್ರಿಕ್ ವಸ್ತುಗಳನ್ನು ನಿರೀಕ್ಷಿಸುತ್ತಿದ್ದ ಮಹಿಳೆಗೆ ಪಾರ್ಸೆಲ್ ನಲ್ಲಿ ಬಂದ ಶವ ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಮನೆಗೆ ಕ್ಷತ್ರಿಯ ಸೇವಾ ಸಮಿತಿಯಿಂದ ಸಾಗಿ ತುಳಸಿ ಎಂಬುವವರು ಆರ್ಥಿಕ ನೆರವು ಬಯಸಿದ್ದರು. ಸಮಿತಿ ಟೈಲ್ಸ್ ಗಳನ್ನು ಕಳುಹಿಸಿತ್ತು. ನಂತರ ಎಲೆಕ್ಟ್ರೀಕ್ ವಸ್ತುಗಳು ಬರಬೇಕಿತ್ತು.
ಪಾರ್ಸೆಲ್ ಬಂದಿದ್ದನ್ನು ಓಪನ್ ಮಾಡಿದಾಗ ಶವ ಕಂಡು ಆಘಾತಕ್ಕೆ ಒಳಗಾಗಿದ್ದು, ಶವದ ಬಳಿ ೧.೩೦ ಕೋಟಿ ರೂ. ನೀಡದೇ ಇದ್ದರೆ ನಿನಗೂ ಇದೇ ಗತಿ ಬರುತ್ತದೆ ಎಂಬ ಬೆದರಿಕೆ ಪತ್ರ ಇಡಲಾಗಿತ್ತು.
ಶವ ಕಂಡು ಮಹಿಳೆ ಹಾಗೂ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದು, ಸುಮಾರು 45 ವರ್ಷದ ವ್ಯಕ್ತಿಯ ಶವ ಇದಾಗಿದ್ದು, 4-5 ದಿನಗಳ ಹಿಂದೆ ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ.
ಪಶ್ಚಿಮ ಗೋದಾವರಿ ಎಸ್ ಪಿ ಅಡ್ನಾನ್ ನಯೀಮ್ ಅಸ್ಮಿ ಕ್ಷತ್ರೀಯ ಸೇವಾ ಸಮಿತಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾಗಿ ತಿಳಿಸಿದ್ದಾರೆ.