Home ವಿದೇಶ ಲಾಸ್ ಏಂಜಲೀಸ್ ಕಾಡ್ಗಿಚ್ಚಿಗೆ 150 ಶತಕೋಟಿ ಡಾಲರ್ ನಷ್ಟ: ತುರ್ತು ಪರಿಸ್ಥಿತಿ ಘೋಷಣೆ

ಲಾಸ್ ಏಂಜಲೀಸ್ ಕಾಡ್ಗಿಚ್ಚಿಗೆ 150 ಶತಕೋಟಿ ಡಾಲರ್ ನಷ್ಟ: ತುರ್ತು ಪರಿಸ್ಥಿತಿ ಘೋಷಣೆ

ಬಹುತೇಕ ಶ್ರೀಮಂತರೇ ನೆಲೆಸಿದ್ದ ಲಾಸ್ ಏಂಜಲೀಸ್ ನಲ್ಲಿ ಮಹಾಮಾರಿಯಂತೆ ಕಾಡ್ಗಿಚ್ಚು ವ್ಯಾಪಿಸುತ್ತಲೇ ಇದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

by Editor
0 comments

ಬಹುತೇಕ ಶ್ರೀಮಂತರೇ ನೆಲೆಸಿದ್ದ ಲಾಸ್ ಏಂಜಲೀಸ್ ನಲ್ಲಿ ಮಹಾಮಾರಿಯಂತೆ ಕಾಡ್ಗಿಚ್ಚು ವ್ಯಾಪಿಸುತ್ತಲೇ ಇದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಮೆರಿಕ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಬಹುದಾದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಲಾಸ್ ಏಂಜಲೀಸ್ ಕರಾವಳಿ ತೀರದಲ್ಲಿ ಮದೊಲ ಬಾರಿ ಕಾಣಿಸಿಕೊಂಡ ಕಾಡ್ಗಿಚ್ಚು ೫ ದಿನಗಳಾದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಸುಮಾರು 12 ಸಾವಿರ ಕಟ್ಟಡಗಳು ಆಹುತಿಯಾಗಿದ್ದು, ಲಕ್ಷಾಂತರ ಜನ ಮನೆ ಮಠ ತೊರೆದು ಸುರಕ್ಷಿತ ಪ್ರದೇಶಗಳಿಗೆ ದೌಡಾಯಿಸಿದ್ದಾರೆ.

ಕಾಡ್ಗಿಚ್ಚಿನಿಂದ ಇಲ್ಲಿಯರೆಗೆ ಸುಮಾರು 150 ಶತಕೋಟಿ ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಲಾಗಿದ್ದು, ಇದು ಅಮೆರಿಕ ಇತಿಹಾಸದಲ್ಲೇ ಅತೀ ಹೆಚ್ಚು ನಷ್ಟ ಉಂಟು ಮಾಡಿದ ಪ್ರಕೃತಿ ವಿಕೋಪವಾಗಿದೆ.

ಲಾಸ್ ಏಂಜಲೀಸ್ ಗವರ್ನರ್ ಬೆಂಕಿ ನಂದಿಸಲು ಬೇಕಾದ ಹೈಡ್ರೋಲಿಕ್ ಕೆಮಿಕಲ್ ಮುಕ್ತಾಯದ ಭೀತಿ ಎದುರಿಸುತ್ತಿದ್ದು, ನೂತನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಲೇ ಅನಾಹುತದ ಸಮೀಕ್ಷೆ ನಡೆಸಲು ಸೂಚಿಸಬೇಕು ಹಾಗೂ ರಕ್ಷಣಾ ಕಾರ್ಯಗಳಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ: ಸಚಿವ ಎಂಬಿ ಪಾಟೀಲ ಜಾತಿ- ಧರ್ಮದ ಬೇಲಿ ಇಲ್ಲದ ಕಂಬಳ ಕ್ರೀಡೆ, ಕಲೆ ಸರ್ವರ ಸಂಭ್ರಮ: ಸಿಎಂ ಸಿದ್ದರಾಮಯ್ಯ ಇಂಗ್ಲೆಂಡ್ ಟಿ-20 ಸರಣಿಗೆ ಭಾರತ ತಂಡ ಪ್ರಕಟ: ಶಮಿ ವಾಪಸ್, ಪಂತ್ ಗೆ ಕೊಕ್! ಹೆರಿಗೆ ವೇಳೆ ಎಣ್ಣೆ ಹೊಡೆಯಲು ಹೋದ ವೈದ್ಯರಿಗೆ 11.42 ಕೋಟಿ ರೂ. ದಂಡ! BBMP ಅತೀ ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡ 830 ವಸತಿಯೇತರ ಕಟ್ಟಡಗಳಿಗೆ ಬೀಗ ಬಾಲಿವುಡ್ ಹಿರಿಯ ನಟ ಟಿಕುಗೆ ಹೃದಯಾಘಾತ; ಸ್ಥಿತಿ ಗಂಭೀರ ಲಾಸ್ ಏಂಜಲೀಸ್ ಕಾಡ್ಗಿಚ್ಚಿಗೆ 150 ಶತಕೋಟಿ ಡಾಲರ್ ನಷ್ಟ: ತುರ್ತು ಪರಿಸ್ಥಿತಿ ಘೋಷಣೆ ದೇಶಾದ್ಯಂತ ಜಲಮಾರ್ಗಗಳ ಅಭಿವೃದ್ದಿಗೆ 50 ಸಾವಿರ ಕೋಟಿ ಹೂಡಿಕೆಗೆ ಐಡಬ್ಲ್ಯೂಡಿಸಿ ನಿರ್ಧಾರ ಪ್ರೇಯಸಿಯ ಕೊಂದು 8 ತಿಂಗಳಿಂದ ಫ್ರಿಡ್ಜ್ ನಲ್ಲಿ ಶವ ಇರಿಸಿದ್ದ ವಿವಾಹಿತ! ಸಮಾಜ ನಮ್ಮ ಪ್ರೀತಿಒಪ್ಪಲ್ಲ: ಬೆಂಗಳೂರಿನಲ್ಲಿ ನಿನ್ನೆ ಪ್ರಿಯಕರ, ಇಂದು ಪ್ರೇಯಸಿ ಆತ್ಮಹತ್ಯೆ!