ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಸ್ಪೇನ್ ರೇಸ್ ನಲ್ಲಿ 2 ಬಾರಿ ಸಂಭವಿಸಿದ ಅಪಘಾತದಲ್ಲಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಅಜಿತ್ ಕುಮಾರ್ ತಮ್ಮದೇ ಪೋರ್ಷೆ ಸ್ಪಿರಿಟ್ ಚಾಲೆಂಜ್ ಹೆಸರಿನ ಸ್ವಂತ ರೇಸ್ ಕಾರು ತಂಡ ಹೊಂದಿದ್ದು, ಸ್ವತಃ ಕಾರು ಚಲಾಯಿಸುತ್ತಿದ್ದಾರೆ.
ಅಜಿತ್ ಕುಮಾರ್ ಚಲಾಯಿಸುತ್ತಿದ್ದ ಕಾರು 2 ಬಾರಿ ಅಪಘಾತಕ್ಕೆ ಒಳಗಾಗಿದ್ದು, ಒಂದು ಬಾರಿ ಕಾರು ಹಲವಾರು ಪಲ್ಟಿ ಹೊಡೆದು ಉರುಳಿ ಬಿದ್ದಿದೆ. ಆದರೆ ಎರಡೂ ಅಪಘಾತಗಳಲ್ಲಿ ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ.
ಅಪಘಾತಗಳ ನಡುವೆಯೂ ಅಜಿತ್ ಕುಮಾರ್ ಕಾರು ಚಲಾಯಿಸಿ ರೇಸ್ ಪೂರ್ಣಗೊಳಿಸಿದ್ದು, 14ನೇ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗೆ ಸ್ಪೇನ್ ವೆಲೆನ್ಸಿಯಾದಲ್ಲಿ ನಡೆದ ರೇಸ್ ನ ಅಭ್ಯಾಸದ ವೇಳೆ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಇದರಲ್ಲೂ ಅವರು ಯಾವುದೇ ಗಾಯ ಇಲ್ಲದೇ ಪಾರಾಗಿದ್ದೂ ಅಲ್ಲದೇ 3ನೇ ಸ್ಥಾನಿಯಾಗಿ ರೇಸ್ ಪೂರ್ಣಗೊಳಿಸಿದ ಸಾಧನೆ ಮಾಡಿದ್ದರು.



