ಬಹುಭಾಷ ಗಾಯಕ ಸೋನು ನಿಗಮ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಕಲ್ಲು, ಬಾಟೆಲ್ ಎಸೆದು ದಾಂಧಲೆ ನಡೆಸಿದ ಘಟನೆ ನಡೆದಿದೆ.
ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದರೂ ತಾಳ್ಮೆ ಕಳೆದುಕೊಳ್ಳದ ಸೋನು ನಿಗಮ್, ನಿಮಗೆ ಇಷ್ಟವಾಗದೇ ಇದ್ದರೆ ಆನಂದಿಸಬೇಡಿ. ಆದರೆ ಈ ರೀತಿ ಕಲ್ಲು ತೂರಾಟ ನಡೆಸಬೇಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡಿದರು.
ಸೋನು ನಿಗಮ್ ಪ್ರದರ್ಶನದ ವೇಳೆ ಪ್ರೇಕ್ಷಕರು ಕಲಾವಿದರ ಮೇಲೆ ಕಲ್ಲು ಮತ್ತು ಬಾಟಲ್ ಗಳನ್ನು ಎಸೆದು ದಾಳಿ ನಡೆಸಿದ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ.



