Sunday, May 17, 2026
Google search engine
Homeವಿದೇಶಕಪ್ಪು ಸಮುದ್ರದಲ್ಲಿ ಸುರಕ್ಷಿತ ಸಂಪರ್ಕಕ್ಕೆ ಉಕ್ರೇನ್-ರಷ್ಯಾ ಒಪ್ಪಂದ!

ಕಪ್ಪು ಸಮುದ್ರದಲ್ಲಿ ಸುರಕ್ಷಿತ ಸಂಪರ್ಕಕ್ಕೆ ಉಕ್ರೇನ್-ರಷ್ಯಾ ಒಪ್ಪಂದ!

ರಷ್ಯಾ ಮತ್ತು ಉಕ್ರೇನ್ ದೇಶಗಳು ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಸಾಗಾಟಕ್ಕೆ ಸುರಕ್ಷಿತ ಸಂಪರ್ಕ ಸಾಧಿಸಲು ಪರಸ್ಪರ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕ ಹೇಳಿದೆ.

ಎರಡೂ ದೇಶಗಳ ಕಪ್ಪು ಸಮುದ್ರ ಮಾರ್ಗದಲ್ಲಿ ಪರಸ್ಪರ ದಾಳಿ ಮಾಡದೇ ಸುರಕ್ಷಿತ ವಾಣಿಜ್ಯ ವ್ಯವಹಾರಗಳಿಗೆ ಸಹಕಾರ ನೀಡಲು ಒಪ್ಪಿಗೆ ಸೂಚಿಸಿವೆ ಎಂದು ವಾಷಿಂಗ್ಟನ್ ನಲ್ಲಿ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ ಮತ್ತು ಉಕ್ರೇನ್ ಒಪ್ಪಂದದಿಂದ ರಷ್ಯಾಗೆ ಇನ್ನು ಮುಂದೆ ಕೃಷಿ, ರಾಸಾಯನಿಕ ಗೊಬ್ಬರದ ಮಾರುಕಟ್ಟೆ ತೆರೆದುಕೊಳ್ಳಲಿವೆ ಎಂದು ವಾಷಿಂಗ್ಟನ್ ತಿಳಿಸಿದೆ.

ಯುದ್ಧಪೀಡಿತ ಎರಡೂ ದೇಶಗಳ ನಡುವೆ ಶಾಂತಿ ಮಾತುಕತೆಗೆ ಅಮೆರಿಕ ಮುಂದಾಗಿದ್ದು, ಹಂತ ಹಂತವಾಗಿ ರಷ್ಯಾ ಮತ್ತು ಉಕ್ರೇನ್ ನಡುವೆ ದಾಳಿ-ಪ್ರತಿದಾಳಿಗೆ ಕಡಿವಾಣ ಹಾಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments