ಸಾವಿರಕ್ಕೂ ಅಧಿಕ ಜನರನ್ನು ಬಲಿ ಪಡೆದ ಪ್ರಬಲ ಭೂಕಂಪನ ಸಂಭವಿಸಿದ ಮ್ಯಾನ್ಮರ್ ಮತ್ತು ಬ್ಯಾಂಕಾಂಕ್ ನಲ್ಲಿ ಭಾನುವಾರ ಮತ್ತೆ ಭೂಮಿ ಕಂಪಿಸಿ ಆತಂಕ ಮೂಡಿಸಿದೆ.
ಶನಿವಾರ ಮಧ್ಯಾಹ್ನ 2.50ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 5.1ರ ತೀವ್ರತೆ ದಾಖಲಿಸಿದೆ.
ಮ್ಯಾನ್ಮರ್ ರಾಜಧಾನಿ ನಯಿಪೇಯಿಡುನಲ್ಲಿ 10 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿ ಕಂಪಿಸಿದ ತೀವ್ರತೆಗೆ ರಸ್ತೆಗಳು ಬಿರುಕು ಬಿಟ್ಟಿದ್ದು, ವಿದ್ಯುತ್ ಸಂಪರ್ಕಗಳು ಕಡಿತಗೊಂಡಿದೆ.
ಶುಕ್ರವಾರ 7.7ಮತ್ತು 6.8ರ ತೀವ್ರತೆಯಲ್ಲಿ ಎರಡು ಬಾರಿ ಸಂಭವಿಸಿದ ಭೀಕರ ಭೂಕಂಪನದಲ್ಲಿ 1000ಕ್ಕೂ ಅಧಿಕ ಜನರು ಅಸುನೀಗಿದ್ದಾರೆ. ಹಲವು ಬಹುಮಹಡಿ ಕಟ್ಟಡಗಳು ಧರೆಗುರುಳಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.



