Thursday, May 14, 2026
Google search engine
Homeದೇಶರೆಪೋ ದರ ಶೇ.6ಕ್ಕೆ ಕಡಿತಗೊಳಿಸಿದ ಆರ್ ಬಿಐ: ಇಳಿಕೆಯಾಗಲಿದೆ ಇಎಂಐ

ರೆಪೋ ದರ ಶೇ.6ಕ್ಕೆ ಕಡಿತಗೊಳಿಸಿದ ಆರ್ ಬಿಐ: ಇಳಿಕೆಯಾಗಲಿದೆ ಇಎಂಐ

ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ತೀವ್ರ ಸ್ವರೂಪದಲ್ಲಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ.6ಕ್ಕೆ ಇಳಿಕೆ ಮಾಡಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ರೆಪೋ ದರದಲ್ಲಿ ಬೇಸಿಕ್ ಅಂಕಗಳ ಮೇಲೆ 25ರಷ್ಟು ಕಡಿತ ಘೋಷಿಸಿದ್ದಾರೆ. ಇದರಿಂದ ರೆಪೋ ದರ ಶೇ.6ಕ್ಕೆ ಇಳಿಕೆಯಾಗಿದೆ.

ಆರ್ ಬಿಐ ರೆಪೋ ದರ ಇಳಿಕೆ ಮಾಡಿದ್ದರಿಂದ ಬ್ಯಾಂಕ್ ಗಳನ್ನು ಗ್ರಾಹಕರು ಮಾಡಿರುವ ಸಾಲದ ಕಂತು ಪಾವತಿಯ ಮೊತ್ತದಲ್ಲಿ ಇಳಿಕೆಯಾಗಲಿದೆ. ಕಳೆದ ಕೆಲವು ತಿಂಗಳಲ್ಲಿ ರೆಪೋ ದರ ಇಳಿಕೆಯಾಗುತ್ತಿರುವುದು ಸತತ 2ನೇ ಬಾರಿಯಾಗಿದೆ. ಕಳೆದ  ಫೆಬ್ರವರಿಯಲ್ಲಿ ರೆಪೋ ದರ ಶೇ.625ಕ್ಕೆ ಇಳಿಕೆ ಮಾಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments