Sunday, June 14, 2026
Google search engine
Homeದೇಶಇನ್ಫೋಸಿಸ್ ನಾರಾಯಣ ಮೂರ್ತಿ 17 ತಿಂಗಳ ಮೊಮ್ಮಗು ಆದಾಯ 10.65 ಕೋಟಿ ರೂ.!

ಇನ್ಫೋಸಿಸ್ ನಾರಾಯಣ ಮೂರ್ತಿ 17 ತಿಂಗಳ ಮೊಮ್ಮಗು ಆದಾಯ 10.65 ಕೋಟಿ ರೂ.!

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ 17 ತಿಂಗಳ ಮೊಮ್ಮಗ ಏಕಾಗ್ರಹ್ ರೋಹನ್ ಮೂರ್ತಿ ಒಂದೇ ವರ್ಷದಲ್ಲಿ 10.65 ಕೋಟಿ ರೂ. ಸಂಪಾದಿಸಿ ಹುಟ್ಟಿದ ಮೊದಲ ವರ್ಷವೇ ಕೊಟ್ಟಿಗಟ್ಟಲೆ ಗಳಿಸಿದ್ದಾನೆ.

ಏಕಾಗ್ರಹ್ ರೋಹನ್ ಮೂರ್ತಿ 2025ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ 3.33 ಕೋಟಿ ರೂ. ಡಿವಿಡೆಂಡ್ ಮೊತ್ತ ಪಡೆದಿದ್ದಾರೆ. ಈ ಮೂಲಕ 2025ನೇ ಸಾಲಿನಲ್ಲಿ 10.65 ಕೋಟಿ ರೂ. ಗಳಿಸಿದ್ದಾನೆ.

ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ ಏಕಾಗ್ರಹ್ ರೋಹನ್ ಮೂರ್ತಿ 2023 ನವೆಂಬರ್ 10ರಂದು ಜನಿಸಿದ್ದು, 5 ತಿಂಗಳು ತುಂಬಿದಾಗ ನಾರಾಯಣ ಮೂರ್ತಿ ಕಂಪನಿಯ ಶೇ.0.04 ಷೇರು ಅಂದರೆ 15 ಲಕ್ಷ ಷೇರುಗಳನ್ನು ಹಸ್ತಾಂತರಿಸಿದ್ದರು. ಇದರ ಮೌಲ್ಯ 240 ಕೋಟಿ ರೂ. ಆಗಿತ್ತು.

ಏಪ್ರಿಲ್ 17 ಗುರುವಾರದಂದು ಇನ್ಫೋಸಿಸ್ ಸಂಸ್ಥೆ ಶೇ.22ರಷ್ಟು ಡಿವಿಡೆಂಡ್ ಘೋಷಿಸಿದೆ. ಮೇ 30ರಂದು ಈ ಮೊತ್ತ ಬಿಡುಗಡೆ ಆಗಲಿದ್ದು, ಜೂನ್ 30ರಂದು ಕೈಸೇರಲಿದೆ.

ಏಕಾಗ್ರಹ್ ಈಗಾಗಲೇ 7.35 ಕೋಟಿ ರೂ. ಸ್ವೀಕರಿಸಿದ್ದು, ಇದೀಗ 3.3 ಕೋಟಿ ಬರಲಿದೆ. ಈ ಮೂಲಕ ಹುಟ್ಟಿದ ಮೊದಲ ವರ್ಷವೇ 10 ಕೋಟಿ ಸಂಪಾದಿಸುವ ಮೂಲಕ ಅತ್ಯಂತ ಕಿರಿಯ ವಯಸ್ಸಿಗೆ ಕೋಟ್ಯಾಧಿಪತಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments