ಪಾಕಿಸ್ತಾನ ಸೇನೆ ಜಮ್ಮು ಗಡಿಯಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್ ಎಫ್ ಅಧಿಕಾರಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆ ಬೆನ್ನಲ್ಲೇ ಪಾಕಿಸ್ತಾನದಿಂದ ಶನಿವಾರ ಸಂಜೆ ನಡೆದ ಅಪ್ರೋಜಿದಿತ ಗುಂಡಿನ ದಾಳಿಯಲ್ಲಿ ಗಡಿಯಲ್ಲಿ ಭಾರತೀಯ ಪಡೆಯನ್ನು ಮುನ್ನಡೆಸುತ್ತಿದ್ದ ಬಿಎಸ್ ಎಫ್ ಹಿರಿಯ ಅಧಿಕಾರಿ ಆಗಿರುವ ಸಬ್ ಇನ್ ಸ್ಪೆಕ್ಟರ್ ಮೊಹಮದ್ ಇಮ್ತಿಯಾಜ್ ಮೃತಪಟ್ಟಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಮೊಹಮದ್ ಇಮ್ತಿಯಾಜ್ ಅತೀ ದೊಡ್ಡ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ಸೇನೆ ಮರೆಯುವುದಿಲ್ಲ. ಗಾಯಗೊಂಡ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ ಎಫ್ ಜನರಲ್ ಡೈರೆಕ್ಟರ್ ಹುತಾತ್ಮ ಯೋಆಧರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇಮ್ತಿಯಾಜ್ ಅವರ ಅಂತ್ಯ ಸಂಸ್ಕಾರ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ಪುಲ್ವಾಮಾದಲ್ಲಿ ನಡೆಯಲಿದೆ.



