Tuesday, May 26, 2026
Google search engine
Homeಅಪರಾಧಬರ್ತಡೆ ಆಚರಿಸಿಕೊಂಡ ಮಾರನೇ ದಿನ ಡೆತ್ ನೋಟ್ ಬರೆದಿಟ್ಟು ಹಾಸ್ಟೇಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಬರ್ತಡೆ ಆಚರಿಸಿಕೊಂಡ ಮಾರನೇ ದಿನ ಡೆತ್ ನೋಟ್ ಬರೆದಿಟ್ಟು ಹಾಸ್ಟೇಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಓದಲು ಇಷ್ಟವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ರಾಯಚೂರು ಮೂಲದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ರಾಯಚೂರಿನ ಮಹಾಂತಪ್ಪ ಅವರ ಏಕೈಕ ಪುತ್ರಿ ಪ್ರಥಮ ವರ್ಷದ ಎಐಎಂಎಲ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್) ಕೋರ್ಸ್‌ ವಿದ್ಯಾರ್ಥಿನಿ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡ ಮರುದಿನ ತೇಜಸ್ವಿನಿ ಸಂಜೆ 4 ಗಂಟೆಗೆ ತರಗತಿಗೆ ಆಗಮಿಸಿದ ನಂತರ ಹಾಸ್ಟೆಲ್ ಕೊಠಡಿಗೆ ತೆರಳಿದ್ದಳು. ಬಳಿಕ ಆಕೆಯ ಸಹಪಾಠಿ ಕೊಠಡಿಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು.

ಸ್ನೇಹಿತರು ಎಷ್ಟೇ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಹಾಸ್ಟೆಲ್ ಮೇಲ್ವಿಚಾರಕರಿಗೆ ವಿಷಯ ತಿಳಿಸಿದರು. ಬಾಗಿಲನ್ನು ತೆಗೆದು ನೋಡಿದಾಗ ತೇಜಸ್ವಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಪೊನ್ನಂಪೇಟೆ ಪೊಲೀಸರು ತನಿಖೆ ನಡೆಸುವಾಗ ತೇಜಸ್ವಿನಿಯ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಅವಳು ತನಗೆ ಮುಂದೆ ಓದಲು ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾಳೆ. 6 ವಿಷಯಗಳಲ್ಲಿ ಬ್ಯಾಕ್ ಲಾಗ್ ಇರುವುದರಿಂದ ಓದುವುದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ ಎಂದು ಬರೆದಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments