Tuesday, June 30, 2026
Google search engine
Homeಜಿಲ್ಲಾ ಸುದ್ದಿಹೇಮಾವತಿ ಕೆನಲ್ ಲಿಂಕ್ ಕಾಮಗಾರಿ ತಾತ್ಕಾಲಿಕ ಸ್ಥಗಿತ: ಪ್ರತಿಭಟನೆ ವಾಪಸ್

ಹೇಮಾವತಿ ಕೆನಲ್ ಲಿಂಕ್ ಕಾಮಗಾರಿ ತಾತ್ಕಾಲಿಕ ಸ್ಥಗಿತ: ಪ್ರತಿಭಟನೆ ವಾಪಸ್

ತುಮಕರು: ರೈತರು, ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಹೇಮಾವತಿ ಕೆನಲ್ ಲಿಂಕ್ ಕಾಮಗಾರಿಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ.

ಹೇಮಾವತಿ ಕೆನಲ್ ಲಿಂಕ್ ಸಂಪರ್ಕಿಸಿ ನಡೆಸಲಾಗುತ್ತಿದ್ದ ಕಾಮಗಾರಿ ವಿರೋಧಿ ಸ್ಥಳೀಯರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಕಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಟಯರ್ ಗೆ ಬೆಂಕಿ ಹಚ್ಚಿ, ಹೆದ್ದಾರಿಗೆ ಮಣ್ಣು ಸುರಿದಿದ್ದು ಅಲ್ಲದೇ ರಸ್ತೆಗೆ ಅಡ್ಡಲಾಗಿ ಮಲಗಿ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಆದೇಶಿಸಿದೆ.

ಕಾಮಗಾರಿ ಸ್ಥಗತಿಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿ ಮುಖಂಡ ಸುರೇಶ್ ಗೌಡ ಮಾತನಾಡಿ, ಹೇಮಾವತಿ ಕೆನಲ್ ಲಿಂಕ್ ಬಗ್ಗೆ ಸಭೆ ಕರೆದು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸುವಂತೆ ಮನವಿ ಮಾಡಿದ್ದಾರೆ. ನಾವು ಕರೆದರೆ ಬಿಜೆಪಿ ಸಭೆ ಆಗುತ್ತದೆ. ನೀವೇ ಸಭೆ ಕರೆಯಿರಿ ಎಂದು ತಾಕೀತು ಮಾಡಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತುಮಕೂರಿನ ಹೇಮಾವತಿ ನದಿ ಕೆನಾಲ್ ಯೋಜನೆಗೆ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರು ಬಗೆಹರಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಹೇಮಾವತಿ ನದಿ ಕೆನಾಲ್ ಯೋಜನೆಯನ್ನು ಅಡ್ಡಿಪಡಿಸುವ ಕೆಲಸವಾಗಬಾರದು. ಈ ಯೋಜನೆಯಿಂದ ರೈತರಿಗೆ ಹಾಗೂ ಸುತ್ತಮುತ್ತಲ ಹಳ್ಳಿಗೆ ಕುಡಿಯುವ ನೀರು ಕೂಡ ಪೂರೈಕೆಯಾಗಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments