ಭಾರತದಲ್ಲಿ 85,698 ಮಂದಿ ಕೋಟ್ಯಾಧಿಪತಿಗಳು ಇದ್ದಾರೆ. ಈ ಮೂಲಕ ವೈಯಕ್ತಿಕವಾಗಿ ಅತೀ ಹೆಚ್ಚು ಆದಾಯ ಗಳಿಸುವವರ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ನೈಟ್ ಫ್ರಾಂಕ್ ಗ್ಲೋಬಲ್ ವೆಲ್ತ್ ರಿಪೋರ್ಟ್ 2025 ವರದಿ ಪ್ರಕಾರ ಅತೀ ಹೆಚ್ಚು ಕೋಟ್ಯಾಧಿಪತಿಗಳನ್ನು ಹೊಂದಿದ ಅಮೆರಿಕ, ಚೀನಾ ಮತ್ತು ಜಪಾನ್ ನಂತರ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ವೈಯಕ್ತಿಕವಾಗಿ ಅತೀ ಹೆಚ್ಚು ಆದಾಯ ಹೊಂದಿದ ಜಗತ್ತಿನ ಶೇ.3.7ರಷ್ಟು ಜನ ಭಾರತ ಹೊಂದಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಉದ್ಯಮಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವೈಯಕ್ತಿಕವಾಗಿ ಹೆಚ್ಚು ಹಣ ಸಂಪಾದಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ವೈಯಕ್ತಿಕವಾಗಿ ಕೋಟ್ಯಾಧೀಶರರಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ನೈಟ್ ಫ್ರಾಂಕ್ ವರದಿಯು ಭಾರತದ ಡಿಜಿಟಲ್ ವ್ಯವಹಾರ ಹೆಚ್ಚಾಗುತ್ತಿದೆ. ಇದಕ್ಕೆ ಬೇಕಾದ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದರಿಂದ ವಿಶೇಷವಾಗಿ ಸ್ಮಾರ್ಟ್ಫೋನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಇದರಿಂದ ಹಣ ಗಳಿಕೆಯ ಮಾರ್ಗಗಳು ಹೆಚ್ಚಾಗುತ್ತಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಭಾರತದ ಬಿಲಿಯನೇರ್ಗಳ ಸಂಖ್ಯೆ 2023ರಲ್ಲಿ 165ರಷ್ಟಿತ್ತು. ಕಳೆದ ವರ್ಷಕ್ಕಿಂತ ಶೇ. 12ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಪ್ರಸ್ತುತ 191 ಬಿಲಿಯನೇರ್ಗಳಿದ್ದಾರೆ,
ಒಂದೇ ವರ್ಷದಲ್ಲಿ 26 ಹೊಸ ಬಿಲಿಯನೇರ್ಗಳು ಸೇರ್ಪಡೆಯಾಗಿದ್ದಾರೆ. 2019 ಹೊಸದಾಗಿ 7 ಬಿಲಿಯನೇರ್ಗಳ ಸೇರ್ಪಡೆಯಾಗಿದ್ದು, ಇದಕ್ಕೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಭಾರತೀಯ ಬಿಲಿಯನೇರ್ಗಳ ಬಳಿ ಸುಮಾರು 0.95 ಟ್ರೆಲಿಯನ್ ಡಾಲರ್ ನಷ್ಟು ಸಂಪತ್ತು ಇದ್ದು, ಫ್ರಾನ್ಸ್, ಜರ್ಮನಿ ಮತ್ತು ಇಂಗ್ಲೆಂಡ್ ಗಿಂತ ಮುಂದಿದ್ದಾರೆ, ಆದರೂ ಅಮೆರಿಕ ಮತ್ತು ಚೀನಾ ಈ ವಿಷಯದಲ್ಲಿ ಹೆಚ್ಚು ಮುಂದಿದೆ.
ಭಾರತದಲ್ಲಿ ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಜಾಗತಿಕವಾಗಿ ಬಿಲಿಯನೇರ್ ಗಳ ಒಟ್ಟಾರೆ ಸಂಪತ್ತು ಶೇ.30ರಷ್ಟು ರಿಯಲ್ ಎಸ್ಟೇಟ್ ನಲ್ಲಿದೆ. ಭಾರತದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ವಿಶೇಷ ಅಂದರೆ ಭಾರತೀಯ ಕೋಟ್ಯಾಧಿಪತಿಗಳು ದುಬೈ, ಲಂಡನ್ ಮತ್ತು ಸಿಂಗಾಪುರಗಳಲ್ಲಿ ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಭಾರತದ ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳ ಜನಸಂಖ್ಯೆಯು 2028 ರ ವೇಳೆಗೆ 43% ರಷ್ಟು ಬೆಳೆಯುವ ನಿರೀಕ್ಷೆಯಿದೆ, ಇದು ಅಂದಾಜು 122,119 ವ್ಯಕ್ತಿಗಳನ್ನು ತಲುಪುತ್ತದೆ. ಈ ಯೋಜಿತ ಬೆಳವಣಿಗೆಯು ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗವಾಗಿದೆ.
ಭಾರತೀಯ ಹೂಡಿಕೆದಾರರಲ್ಲಿ ಷೇರುಗಳು ಮತ್ತು ಅಪಾಯ ಆಧಾರಿತ ಸ್ವತ್ತುಗಳ ಬಗ್ಗೆ ಹೆಚ್ಚುತ್ತಿರುವ ಹಸಿವು ಯುರೋಪ್ ಅಥವಾ ಜಪಾನ್ನಲ್ಲಿನ ಹೆಚ್ಚು ಸಂಪ್ರದಾಯವಾದಿ ಹೂಡಿಕೆದಾರರಿಗಿಂತ ಅವರನ್ನು ಪ್ರತ್ಯೇಕಿಸುತ್ತದೆ ಎಂದು ವರದಿಯು ಗಮನಿಸುತ್ತದೆ.



